ತುಮಕೂರು: ಆರೋಪಗಳು ಶಿವ, ಬ್ರಹ್ಮ, ಕೃಷ್ಣನನ್ನೇ ಬಿಟ್ಟಿಲ್ಲ. ಶಮಂತಕ ಮಣಿ ವಿಚಾರದಲ್ಲಿ ಕೃಷ್ಣನನ್ನೇ ಕಳ್ಳ ಅಂದರು ಅಂತಹದರಲ್ಲಿ ಮೋದಿಯನ್ನು ಬಿಡ್ತಾರಾ..ಹೀಗೆ ಹೇಳಿದ್ದು ರಾಜ್ಯಸಭಾ ಸದಸ್ಯ ಜಗ್ಗೇಶ್.
ಘರ್ಜಿಸುತ್ತಿರುವ ಆ ಸಿಂಹ ಮೋದಿ ಎಂದು ಜಗ್ಗೇಶ್ ಲಾಂಛನ ತಿರುಚಿದ ಆರೋಪ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ಜನ ಎದೆಯುಬ್ಬಿಸಿ ಹೇಳಬೇಕಾದದ್ದು ಒಳ್ಳೆಯ ಧೀಮಂತ ನಾಯಕ ಸಿಕ್ಕಿದ್ದಾನೆ ಅಂತ.
ಅಶೋಕ ಲಾಂಛನದ ಮೂಲ ಬೇಕಾದವರು ಮ್ಯೂಸಿಯಂನಲ್ಲಿ ನೋಡಲಿ. ಮ್ಯೂಸಿಯಂನಲ್ಲಿ ಇರುವ ಹಾಗೆ ಯಥಾವತ್ ಸಿಂಹ ಲಾಂಛನವನ್ನು ಸೆಂಟ್ರಲ್ ವಿಸ್ತಾದಲ್ಲಿ ಮಾಡಲಾಗಿದೆ ಎಂದಿದು ಹೇಳಿದರು.
ಇಷ್ಟು ವರ್ಷ ಲಾಂಛನದ ಬಾಯಿ ಮುಚ್ಚಿತ್ತು. ಈಗ ಬಹಳ ಸ್ವಾಭಿಮಾನದಿಂದ ಬಾಯಿ ತೆರೆದಿದೆ. ಮತ್ತೇ ಘರ್ಜನೆ ಮಾಡುತ್ತಿದೆ.
ಸುಖಾಸುಮ್ಮನೆ ಮೋದಿ ವಿರುದ್ಧ ಮಾತನಾಡುತ್ತಾರೆ. ಅವರನ್ನು ಆರಾಧಿಸುವವರ ಸಂಖ್ಯೆ ಶೇ.98ರಷ್ಟು ಇದೆ. ವಿರೋಧಿಸುವವರ ಸಂಖ್ಯೆ ಕೇವಕ 2ರಷ್ಟು.
ಅದಕ್ಕೆ ಏನೂ ಮಾಡೋಕೆ ಆಗಲ್ಲ ಎಂದು ಪ್ರತಿಪಕ್ಷದವರ ಆರೋಪಗಳಿಗೆ ಟಾಂಗ್ ನೀಡಿದರು.