(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ : ಸರ್ಕಾರ ಇತ್ತೀಚಿಗೆ ಜಾರಿಗೆ ತಂದ ಆದೇಶ ಸುತ್ತೋಲೆಯಲ್ಲಿ ಕನ್ನಡ ಪದಗಳ ಕೊಲೆ ಮಾಡಲಾಗಿದ್ದು, ಕನ್ನಡಭಿಮಾನಿಗಳಲ್ಲಿ ಆಕ್ರೋಶ ಉಂಟುಮಾಡಿದೆ.
ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಸಾರ್ವಜನಿಕರು ಅಪ್ಪಿ ತಪ್ಪಿಯೂ ವಿಡಿಯೋ ಚಿತ್ರೀಕರಣ ಅಥವಾ ಫೋಟೋ ತೆಗೆಯಬಾರದೆಂಬ ಆದೇಶದ ಸುತ್ತೋಲೆಯನ್ನು ಸರ್ಕಾರ ವಾಪಸ್ ಪಡೆಯುವ ಆತುರದಲ್ಲಿ ಕನ್ನಡ ಪದಗಳ ಕೊಲೆ ಮಾಡಿ ಎಡವಟ್ಟು ಮಾಡಿದೆ.
ಆದೇಶವನ್ನು ರಾತ್ರೋರಾತ್ರಿ ವಾಪಸ್ ಪಡೆಯುವ ಭರಾಟೆಯಲ್ಲಿ ಹೊರಡಿಸಲಾಗಿದ್ದ ಆದೇಶ ಪತ್ರದಲ್ಲಿ ಸಾಕಷ್ಟು ವ್ಯಾಕರಣ ದೋಷಗಳು ಕಂಡು ಬಂದಿದೆ ಇದು ನಿಜಕ್ಕೂ ಅವಮಾನ.
ನಡಾವಳಿ ಎಂಬ ಪದಕ್ಕೆ ನಡವಳಿ,ಪ್ರಸ್ತಾವನೆ ಎಂಬ ಪದಕ್ಕೆ ಪ್ರಸತ್ತಾವನೆ,ಮೇಲೆ ಎಂಬ ಪದಕ್ಕೆ ಮೇಲೇ,
ಭಾಗ-1 ಎಂಬುದಕ್ಕೆ ಬಾಗ-1,ಕರ್ನಾಟಕ ಎಂಬುದಕ್ಕೆ ಕರ್ನಾಟಾ, ಆಡಳಿತ ಎಂಬುದಕ್ಕೆ ಆಡಳಿದ ಎಂದು ತಪ್ಪು ತಪ್ಪಾಗಿ ಟೈಪ್ ಮಾಡಿ ನಿದ್ದೆಗಣ್ಣಿನಲ್ಲಿ ಸಹಿ ಹಾಕಿ ಆದೇಶ ಹೊರಡಿಸಲಾಗಿದೆ.
ರಾತ್ರೊ ರಾತ್ರಿ ಆದೇಶ ಹೊರಡಿಸೊ ಭರಾಟೆಯಲ್ಲಿ ಬೆರಳಚ್ಚುಗಾರರು ನಿದ್ದೆಗಣ್ಣಿನಲ್ಲಿ ಟೈಪ್ ಮಾಡಿ ನೀಡಿದ್ದಾರೋ ಗೊತ್ತಿಲ್ಲ, ಆದರೆ ಆ ತಪ್ಪನ್ನ ನೋಡದೆಯೇ ಉಪಕಾರ್ಯದರ್ಶಿ ಆನಂದ್ ಅವರು ಸಹಿ ಹಾಕಿದ್ದಾರೆ..!
ರಾಜ್ಯವನ್ನು ಆಳುವ ಸರ್ಕಾರವೇ ಇಂತಹ ತಪ್ಪುಗಳನ್ನು ಮಾಡಿದರೆ ಹೇಗೆ ಎಂದು ಕನ್ನಡ ಅಭಿಮಾನಿಗಳು ಹಾಗೂ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.