ವಿದ್ಯಾರ್ಥಿ ಅಪಹರಣ: ಒಂದೆರಡು ಗಂಟೆಗಳಲ್ಲೇ ಆರೋಪಿಗಳು ಅಂದರ್

ಬೆಂಗಳೂರು: ಕಾಲೇಜು ವಿದ್ಯಾರ್ಥಿಯೊಬ್ಬನ ಅಪಹರಣವಾದ ಒಂದೆರಡು ಗಂಟೆಗಳಲ್ಲೇ ಪೊಲೀಸರು ಆರೋಪಿಗಳ ಹೆಡಿಮುರಿ ಕಟ್ಟಿದ್ದಾರೆ.

ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೇವಾ ಕಾಲೇಜು ವಿದ್ಯಾರ್ಥಿಯ ಅಪಹರಣ ವಾಗಿತ್ತು.

ಪ್ರಕರಣ ವರದಿಯಾದ ಕೇವಲ 3 ತಾಸುಗಳಲ್ಲಿ ಚಿತ್ರದುರ್ಗ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಬಂಧಿಸಲಾಗಿದೆ.

ಕಲುಬುರ್ಗಿಯ ರಮೇಶ್ ರಾಥೋಡ್‌(43), ರಿಜ್ವಾನ್ ಪಟೇಲ್ (23), ಇಂದ್ರಜಿತ್ ಪವಾರ್ (23)ಹಾಗೂ ಕಲಬುರ್ಗಿ

ಕಾಳಗಿ ಗ್ರಾಮದ ಹರೀಶ್ ಕುಮಾರ್(24) ಬಂಧಿತ ಆರೋಪಿಗಳು.

ಆರೋಪಿಗಳು ವಿದ್ಯಾರ್ಥಿಯ ತಂದೆಯ ಜೊತೆಗಿನ ವ್ಯವಹಾರಕ್ಕೆ ಸಂಬಂಧಿಸಿದಂತೆ   ಹಣಕ್ಕಾಗಿ ಅಪಹರಣ ಮಾಡಲಾಗಿತ್ತೆಂದು ತಿಳಿದುಬಂದಿದೆ.

ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಚಿತ್ರದುರ್ಗ ಎಸ್.ಪಿ., ಪಿ.ಎಸ್.ಐ ಐಮಂಗಲ ಮಂಜುನಾಥ್ ಮತ್ತು ಅವರ ತಂಡ ಮುಖ್ಯ ಪಾತ್ರ ವಹಿಸಿದ್ದರು.

ಆರೋಪಿಗಳಿಂದ 1 ಇನ್ನೋವ ಕಾರು ಮತ್ತು 1 ಪೋರ್ಚುನೇರ್ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.