ಪ್ಲೆಕ್ಸ್ ಗಳ ಅಬ್ಬರ: ನ್ಯಾಯಾಲಯದ ಆದೇಶಕ್ಕೂ ಡೋಂಟ್ ಕೇರ್, ಜಿಲ್ಲಾಡಳಿತಕ್ಕೂ ಡೊಂಟ್ ಕೇರ್ !

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಜಿಲ್ಲಾದಿಕಾರಿ ಆದೇಶಕ್ಕೂ ಬೆಲೆ ಕೊಡದೆ ರಾಜ್ಯದ ರಾಜಕಾರಣಿಗಳು ತನ್ಮ ಅಬಿಮಾನಿ ಸಂಘದ ಮೂಲಕ ಪ್ಲೆಕ್ಸ್ ಬ್ಯಾನರ್ ಅಳವಡಿಸೊ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿರುವ ಅಂಶ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯಾದಾದ್ಯಂತ ಪ್ಲೆಕ್ಸ್ ಬ್ಯಾನರ್ ನಿಷೇಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.ಇತ್ತ ಜಿಲ್ಲಾದಿಕಾರಿಗಳು ಕೂಡ ಆದೇಶಿಸಿ ಪ್ಲೆಕ್ಸ್, ಬ್ಯಾನರ್ , ಪ್ಲಾಸ್ಟಿಕ್ ನಿಷೇದ ಸಂಬಂದ ಆದೇಶ ಹೊರಡಿಸಿದ್ದರೂ ಕ್ಯಾರೆ ಎನ್ನದೆ ಪ್ಲೆಕ್ಸ್ ಅಳವಡಿಸಿದ್ದಾರೆ‌.

ಚಾಮರಾಜನಗರದ ಪಚ್ಚಪ್ಪ ವೃತ್ತ,  ಬಿ.ರಾಚಯ್ಯ ಜೋಡಿ ರಸ್ತೆಯ ಪ್ರತಿ ವಿದ್ಯುತ್ ಕಂಬಗಳು ಸೇರಿದಂತೆವ ವಿವಿದ  ವೃತ್ತಗಳಲ್ಲಿ ಫ್ಲೆಕ್ಸ್ ಗಳ ಆರ್ಭಟ ಜೋರಾಗಿದ್ದು ಇದರಿಂದ ವಾಹನ ಸವಾರಿಗೆ ಕಿರಿಕಿರಿ ಜೊತೆಗೆ ನಗರದ ಸೌಂದರ್ಯ ಕೂಡ ಹಾಳುಗೆಡುವುತ್ತಿದ್ದಾರೆ.

ಪ್ರಮುಖವಾಗಿ ಎಲ್ಲದಕ್ಕಿಂತ ಮಿಗಿಲಾಗಿ ಜಿಲ್ಲಾದಧಿಕಾರಿ ತೆರಳೊ ಕಛೇರಿ ಜಿಲ್ಲಾಡಳಿತ ಭವನ ಮುಂಭಾಗ ರಾಜಾರೋಷವಾಗಿ ಹಾಕಿ ಜಿಲ್ಲಾದಧಿಕಾರಿಯ ಆದೇಶಕ್ಕೆ ಕವಡೆಕಾಸಿನ ಬೆಲೆ ಇಲ್ಲದಂತಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಜನ್ಮ ದಿನದಂದು ಪ್ಲೆಕ್ಸ್ ಅಳವಡಿಸಲಾಗಿದ್ದು ಸ್ಥಳೀಯ ನಗರಸಭೆಯಿಂದ ಅನುಮತಿಯನ್ನ ಪಡೆಯದೆ ರಾಜಾರೋಷವಾಗಿ ಹಾಕಲಾಗಿದೆ ಅಷ್ಟೆ ಅಲ್ಲದೆ ನಗರಸಭೆಯ ಅಧ್ಯಕ್ಷಿಣಿ ಭಾವಚಿತ್ರವುಳ್ಳ ಪ್ಲೆಕ್ಸ್ ರಾಜಾರೋಷವಾಗಿ ಸಂಭ್ರಮಿಸುತ್ತಿದೆ.

ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಫ್ಲೆಕ್ಸ್ ವಿಚಾರಕ್ಕೆ ಸೋಮಣ್ಣ ಅಭಿಮಾನಿಗಳು ಹಾಗೂ ಕೆಆರ್ಎಸ್ ಪಕ್ಷದ ನಡುವೆ ಗಲಾಟೆ ಕೂಡ ನಡೆದಿತ್ತು. ವ್ಯಾಪಕ ಚರ್ಚೆಗೆ ಗ್ರಾಸಕೂಡ ಆಗಿತ್ತು.

 ಚಾಮರಾಜನಗರ ಪಟ್ಟಣದಲ್ಲಿ ಹಿಂದೆಯೂ ಪ್ಲೆಕ್ಸ್ ಅಳವಡಿಕೆ ಸಂಬಂಧ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗಿ  ಗೋಲಿಬಾರ್ ಕೂಡ ಆಗಿತ್ತು.

ಅಷ್ಟೆ ಅಲ್ಲ ಕೆಲವೊಮ್ಮೆ ಈ ಜಿಲ್ಲೆಯಲ್ಲಿ ಮಹಾನ್ ನಾಯಕರಿಗೆ ಚಪ್ಪಲಿ ಹಾರ ಹಾಕುವ ಮೂಲಕ ಸಂಘರ್ಷ ಕೂಡ ನಡೆದಿದ್ದವು.

ನಗರಸಭೆ ಅಧಿಕಾರಿಗಳು ಮೌನ: ಪ್ಲೆಕ್ಸ್ ತೆರವು ಮಾಡಬೇಕಾದ ಅದಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಅಭಿಮಾನಿಗಳ ಕಟೌಟ್ ತೆರವು ಮಾಡಲು ಭಯಪಡುವುದು ಒಂದೆಡೆಯಾದರೆ ಜಿಲ್ಲಾದಧಿಕಾರಿಗಳೂ ಮೌನವಾಗಿ ನ್ಯಾಯಾಲಯ ಆದೇಶಗಳನ್ನ ಗಾಳಿಗೆ ತೂರಿದ್ದಾರೆ.

ನ್ಯಾಯಾಲಯದ ಆದೇಶ ಉಲ್ಲಂಘಸಿದರೂ ಪರ್ವಾಗಿಲ್ಲ ರಾಜಕಾರಣಿಗಳ ಎದುರು ಹಾಕಿಕೊಳ್ಳುವ ಉಸಾಭರಿ ನಮಗೇಕೆ ? ಎಂದು ಜಿಲ್ಲಾಧಿಕಾರಿಗಳೆ ಸುಮ್ಮನಿರುವಾಗ ನಮ್ಮದೇನು ಎಂಬಂತೆ ನಗರಸಭಾ ಅಧಿಕಾರಿಗಳೂ ಜಾಣ ಕುರುಡಾಗಿದ್ದಾರೆ.

ನ್ಯಾಯಾಲಯ ಮತ್ತೆ ಚಾಟಿ ಬೀಸುವುದೇ?: ನ್ಯಾಯಾಲಯ ಆದೇಶ ಉಲ್ಲಂಘನೆ ಸಂಬಂಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳು ನ್ಯಾಯಾಲಯ ಆಡಳಿತಾದಿಕಾರಿಗಳಿಗಾಗಲಿ, ಕಾ.ಸೇ.ಪ್ರಾಧಿಕಾರದ ಅದ್ಯಕ್ಷರಿಗಾಗಲಿ ಸುಮೊಟೊ ಪ್ರಕರಣ ದಾಖಲಿಸಲು ರಾಜ್ಯ  ಉಚ್ಚ ನ್ಯಾಯಾಲಯ ಆಡಳಿತಾದಧಿಕಾರಿಗಳು ಕ್ರಮಜರುಗಿಸಬೇಕಾಗಿದೆ.