ಕಡಿಮೆ ಹಣ ನೀಡಿದ್ದನ್ನು ಪ್ರಶ್ನಿಸಿದ ಸಪ್ಲೈಯರ್ ಹತ್ಯೆ

ಮೈಸೂರು: ಬಾರೊಂದರಲ್ಲಿ ನೂರು ರೂ. ಕಡಿಮೆ ನೀಡಿದ್ದನ್ನು ಪ್ರಶ್ನಿಸಿದ್ದಕ್ಕೇ ಸಪ್ಲೈಯರ್ ನನ್ನು ಚಾಕುವಿನಿಂದ ಇರಿದು ಕೊಲೆಗೈದ ಹೇಯ ಘಟನೆ ವಿದ್ಯಾರಣ್ಯಪುರಂನಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.

ಮಂಡ್ಯ ಮೂಲದ ನಂದನ್ ಕುಮಾರ್ ಅಲಿಯಾಸ್ ಅಪ್ಪಿ ಕೊಲೆಯಾಗಿರುವ ಸಪ್ಲೈಯರ್.

ವಿದ್ಯಾರಣ್ಯಪುರಂನ ಮಾನಂದವಾಡಿ ರಸ್ತೆಯಲ್ಲಿರುವ ನವರಂಗ್ ಬಾರ್ ಗೆ ಮಹದೇವ್ ಪುರ ಹುಡುಗರ ತಂಡವೊಂದು ಬಂದಿದ್ದು ಮದ್ಯ ಸೇವಿಸಿದ್ದಾರೆ.

ಮದ್ಯ ಸೇವಿಸಿ ಬಿಲ್ ನಲ್ಲಿ ನಮೂದಾಗಿದ್ದ ಅಮೌಂಟ್ ಗಿಂತ ನೂರು ರೂ. ಕಡಿಮೆ ನೀಡಿದ್ದರು.

ಇದನ್ನು‌ ಕಂಡು ಸಪ್ಲೈಯರ್ ನಂದನ್ ಕುಮಾರ್ ಪ್ರಶ್ನಿಸಿದ್ದಾನೆ.

ಇದರಿಂದ ಕೋಪಗೊಂಡ ಹುಡುಗರು ನಂದನ್ ಕುಮಾರ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ತಿಳಿದುಬಂದಿದೆ.

ಸ್ಥಳಕ್ಕೆ ವಿದ್ಯಾರಣ್ಯಪುರಂ ಠಾಣಾ ಇನ್ಸ್ಪೆಕ್ಟರ್ ರಾಜು, ಸಬ್ ಇನ್ಸ್ಪೆಕ್ಟರ್ ರಂಗಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿದ್ಯಾರಣ್ಯಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.