ಮೈಸೂರು: ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬೈಕ್ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಬೆಮೆಲ್ ಬಡಾವಣೆಯ ಕೆ.ಕಾರ್ತಿಕ್ ನಾಯಕ್(20), ಜೆ.ಪಿ. ನಗರದ ಕೆ.ಎಸ್.ಕಿರಣ್(32) ಬಂಧಿತ ಆರೋಪಿಗಳು.
ಆರೋಪಿಗಳು ಏಪ್ರಿಲ್ 7 ರಂದು ಶ್ರೀರಾಂಪುರ ಎರಡನೇ ಹಂತದಲ್ಲಿ ಬುಲೆಟ್ ಬೈಕ್ ಕಳವು ಮಾಡಿದ್ದರು.
ಬೈಕ್ ಮಾಲೀಕರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಆರೋಪಿಗಳು ಮೈಸೂರಿನ ಕುವೆಂಪುನಗರ ಠಾಣೆ ವ್ಯಾಪ್ತಿಯಲ್ಲಿ 5, ರಾಮನಗರದ ಐಜೂರು ಠಾಣೆಯಲ್ಲಿ 3, ಸರಸ್ವತಿಪುರಂ ಠಾಣೆಯಲ್ಲಿ 2, ಅಶೋಕಪುರಂ, ವಿಜಯನಗರ, ಆಲನಹಳ್ಳಿ ಹಾಗೂ ನಂಜನಗೂಡು ಪಟ್ಟಣ ಠಾಣೆಯಲ್ಲಿ ತಲಾ ಒಂದು ಬೈಕ್ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
9 ರಾಯಲ್ ಎನ್ ಫೀಲ್ಡ್, 3 ಹೋಂಡಾ ಆಕ್ಟೀವಾ, 1 ಪಲ್ಸರ್, 1 ಯಮಹಾ ಬೈಕ್ ಹಾಗೂ 11 ಸಾವಿರ ಮೌಲ್ಯದ ಎರಡು ಮೊಬೈಲ್ ಸೇರಿ 14 ಲಕ್ಷ ಮೌಲ್ಯದ ಮಾಲನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಎಂ.ಎಸ್.ಗೀತಾ ಪ್ರಸನ್ನ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಎಸಿಪಿ ಗಂಗಾಧರ ಸ್ವಾಮಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಷಣ್ಮುಗ ವರ್ಮ, ಪಿಎಸ್ಐಗಳಾದ ರಾಧಾ, ಗೋಪಾಲ್, ಎಎಸ್ಐ ಮಹದೇವ ಹಾಗೂ ಸಿಬ್ಬಂದಿಗಳಾದ ಮಂಜುನಾಥ್, ಪುಟ್ಟಣ್ಣ, ಯೋಗೇಶ್, ನಾಗೇಶ್, ಹಜರತ್, ಶ್ರೀನಿವಾಸ್ ಕೋರ್ಟ್, ಮಂಜು, ಶಿವಕುಮಾರ್, ಸುರೇಶ್ ಕುರಟ್ಟಿ, ಪ್ರಸನ್ನ, ಕಾರ್ತಿಕ್, ವೆಂಕಟೇಶ್, ಮುಕುಂದ, ನವೀನ್ ಪಾಲ್ಗೊಂಡಿದ್ದರು.