ಎಸಿಬಿ ಬಲೆಗೆ ಆರೋಗ್ಯ ಇಲಾಖೆ ನೌಕರ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ದೂರುದಾರನೊಬ್ಬನಿಗೆ ಕೆಲಸದ ಬಗ್ಗೆ ಆದೇಶ ಪತ್ರ ಹಾಗೂ ಮೂರು ತಿಂಗಳ ಸಂಬಳ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಗ್ಯ ಇಲಾಖೆ ನೌಕರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಚಾಮರಾಜನಗರ ಜಿಲ್ಲಾ ಆರೋಗ್ಯ ಇಲಾಖೆಯ ಪ್ರಥಮ ದರ್ಜೆಯ ಸಹಾಯಕ ಮಹೇಶ ಎಂಬಾತನೆ ಎಸಿಬಿ ಬಲೆಗೆ ಬಿದ್ದ ನೌಕರ.

ದೂರುದಾರರಿಗೆ ಮೂರು ತಿಂಗಳ ಹಣ ಹಾಗೂ ಕೆಲಸದ ಬಗ್ಗೆ ಆದೇಶ ಪ್ರತಿ ನೀಡಲು 20 ಸಾವಿರ ಕೇಳಿದ್ದ ಎನ್ನಲಾಗಿದೆ. ನಂತರ 10 ಸಾವಿರಕ್ಕೆ ಬಂದು ಕೊನೆಗೆ ಮೂರು ಸಾವಿರಕ್ಕೆ ಅಂತಿಮವಾಗಿತ್ತು.

ಮೂರು ಸಾವಿರ ರೂ. ಹಣ ಪಡೆಯುವ ವೇಳೆ ಚಾಮರಾಜನಗರ ಎಸಿಬಿ ಘಟಕಕ್ಕೆ ಮಹೇಶ ಸಿಕ್ಕಿಬಿದ್ದಿದ್ದಾನೆ.

ಚಾಮರಾಜನಗರ ಎಸಿಬಿ ಘಟಕದ ಡಿವೈಸ್ಪಿ ಸದಾನಂದ ತಿಪ್ಪಣ್ಣನ್ನವರ್ ಹಾಗೂ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.