ಚಾಮರಾಜನಗರ: ನೆರೆಪರಿಹಾರಕ್ಕೊಳಪಟ್ಟ ಜನರನ್ನ ಸ್ಥಳಾಂತರಿಸಲು ಮಾಡಿದ ಕಾಳಜಿ ಕೇಂದ್ರದಲ್ಲಿ ಹೇಳುವವರಿಲ್ಲದೆ, ಕೇಳುವವರಿಲ್ಲದೆ ಕಾಳಜಿ ಕೇಂದ್ರ ನಿಷ್ಕಾಳಜಿ ಕೇಂದ್ರವಾಗಿದೆ.
ಕೊಳ್ಳೇಗಾಲದ ದಾಸನಪುರ, ಯಳಂದೂರಿಬ ಗಣಿಗನೂರು ಸೇರಿದಂತೆ ಇನ್ನಿತರ ನೆರೆಪೀಡಿತ ಕೇಂದ್ರಗಳಿಗೆ ಭೇಟಿ ನೀಡಿದ ಕಂದಾಯ ಸಚಿವ ಅಶೋಕ್ ಅವರಿಗೆ ಕಾಳಜಿ ಕೇಂದ್ರದ ಸಮಸ್ಯೆಗಳ ಮಹಾಪೂರವೆ ಹರಿಯಿತು.
ಗಣಿಗನೂರು ಗ್ರಾಮದ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದಿದ್ದರೆ ಅಲ್ಲಿರುವ ೫೦ಕ್ಕೂ ಹೆಚ್ಚು ಜನರಿಗೆ ಊಟ ತಿಂಡಿ ಇಲ್ಲದೆ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕಾಳಜಿ ಕೇಂದ್ರದಲ್ಲಿ ಆಶ್ರಯಪಡೆಯುತ್ತಿರುವ ವಯೋವೃದ್ದರು ತಿಳಿಸಿದಂತೆ ರಾತ್ರಿ ೧೨ ಗಂಟೆಗೆ ಊಟ ಬಂದರೆ ಬೆಳಿಗ್ಗೆ ತಿಂಡಿಯೂ ಇಲ್ಲ, ಊಟವು ಮದ್ಯಾಹ್ನ 3 ಆದರೂ ಬಂದಿಲ್ಲ ಎಂದು ದೂರಿದರು.
ಸಚಿವರು ನಿರಾಶ್ರಿತರ ಜೊತೆ ಊಟ ಮಾಡುತ್ತೇವೆ ಎಂದವರು ಚಾಮರಾಜನಗರ ಹೊಟೆಲ್ ಒಂದರಿಂದ ತಂದಿದ್ದ ಊಟವನ್ನ ಸಚಿವ ಅಶೋಕ್ ಕಾಳಜಿ ಕೇಂದ್ರದಲ್ಲಿ ಮಾಡಿದರು.
ಕಾಳಜಿ ಕೇಂದ್ರದಲ್ಲಿರೊ ನಿರಾಶ್ರಿತರಿಗೆ ಬೇರೆ ಊಟ ಏರ್ಪಡು ಮಾಡಲಾಗಿತ್ತು.