ಜಕ್ಕೂರು ಕೆರೆಯಲ್ಲಿ ರಾಶಿ,ರಾಶಿ ಮೀನುಗಳ ಸಾವು!

ಬೆಂಗಳೂರು: ರಾಸಾಯನಿಕ ವಸ್ತುಗಳು ಕೆರೆಯ ನೀರಿಗೆ ಸೇರಿ ರಾಶಿ,ರಾಶಿ ಮೀನುಗಳು ಸಾವನ್ನಪ್ಪಿರುವ ಪ್ರಕರಣ ಬೆಂಗಳೂರಿನಲ್ಲೆ ನಡೆದಿದೆ.

ನಗರದ‌ ಪ್ರಸಿದ್ದ ಜಕ್ಕೂರು ಕೆರೆ ಕಲುಷಿತಗೊಂಡಿದ್ದು ಮೀನುಗಳ ಮಾರಣ ಹೋಮವೇ ಆಗಿದೆ.

ಕಲುಷಿತ ನೀರು ಸ್ವಚ್ಚಂದದಿಂದ ಜೀವನ ನಡೆಸುತ್ತಿದ್ದ ಮೀನುಗಳಿಗೆ ಮಾರಕವಾಗಿದೆ.

ಕೆರೆಯ ದಡದಲ್ಲೇ ರಾಶಿಗಟ್ಟಲೆ ಸತ್ತು ಬಿದ್ದಿರುವ ಮೀನುಗಳಿಂದ ದುರ್ವಾಸನೆ ಪ್ರಾರಂಭವಾಗಿದ್ದು ಸ್ಥಳೀಯರು ಮೂಗು ಮುಚ್ಚಿ ಸಂಚರಿಸಬೇಕಿದೆ.

ಜಕ್ಕೂರು ಕೆರೆಯಲ್ಲಿ ಟೆಂಡರ್ ಪಡೆದು ಹಲವರು ಮೀನು ಸಾಕಾಣಿಕೆ ಮಾಡಿತ್ತಿದ್ದರು.ಇದೀಗ ಅವರಿಗೂ ಸಾಕಷ್ಟು ನಷ್ಟವಾಗಿದೆ.

ಮೀನುಗಳ ಮಾರಣ ಹೋಮಕ್ಕಡ ಬಿಬಿಎಂಪಿ ಹಾಗೂ ಪರಿಸರ  ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.