ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ನಡೆದು ಎರಡು ವಾರಗಳ ನಂತರ ಮೂವರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಪೊಲೀಸರು ಬಂಧಿಸಿದ್ದು ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಸುಳ್ಯದ ರಿಯಾಜ್ (33), ಶಿಯಾಜ್ (27),ಎಲೆಮಲೆ ವಾಸಿ ಬಷೀರ್ (28) ಬಂಧಿತ ಆರೋಪಿಗಳು ಎಂದು ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಂತಕರಿಗೆ ಪಿ ಎಫ್ ಐ ಮತ್ತು ಎಸ್ ಡಿ ಪಿಐ ಜತೆ ಲಿಂಕ್ ಇದೆ ಎಂದು ಮಾಹಿತಿ ನೀಡಿದರು.
ಆರೋಪಿಗಳ ಬಗ್ಗೆ ಎಲ್ಲಾ ಮಾಹಿತಿ ಸಂಗ್ರಹಿಸಿದ ಎನ್ ಐ ಎ ತಂಡದ ನೆರವಿನಲ್ಲಿ ತಳವಾಡಿ ಚೆಕ್ ಪೋಸ್ಟ್ ಬಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಹಂತಕರ ಬಂಧನದ ನಂತರವೂ ಎನ್ ಐಎ ತನಿಖೆಯನ್ನು ಮುಂದುವರಿಸಿದೆ.ಹಂತಕರ ಲಿಂಕ್ ಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಜಾಲಾಡಲಾಗುತ್ತಿದೆ.
ಪ್ರವೀಣ್ ಹತ್ಯೆ ರಾಜ್ಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು.ಸ್ವಪಕ್ಷದ ಸರ್ಕಾರ ವಿದ್ದರೂ ಕಾರ್ಯಕರ್ತರನ್ನು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಿದ್ದರು.
ಸ್ಥಳೀಯ ಪೊಲೀಸರು ಹಂತಕರ ಬಂಧನಕ್ಕೆ ತಲಾಷಿ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ.ಹಾಗಾಗಿ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ತನಿಖೆಯ ಜವಾಬ್ದಾರಿಯನ್ನು ಸರ್ಕಾರ ಎನ್ ಐ ಎಗೆ ವಹಿಸಿದೆ.
ಈ ತಂಡದ ನೆರವಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಸರ್ಕಾರ ಬಹುಮಾನ ಘೋಷಿಸಿದೆ.