ಚಾಮರಾಜನಗರದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಸೋಮಣ್ಣ

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ವಿ‌.ಸೋಮಣ್ಣ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ 76ನೆ ವರ್ಷದ ಸ್ವಾತಂತ್ರ್ಯದಿನದ ಧ್ವಜಾರೋಹಣ ನೆರವೇರಿಸಿದರು‌. 
ಧ್ವಜಾರೋಹಣ ಬಳಿಕ ಪೊಲೀಸರು, ಅಬಕಾರಿ ಸಿಬ್ಬಂದಿ, ಶಾಲಾ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನದ ಗೌರವ ವಂದನೆಯನ್ನು ಸ್ಬೀಕರಿಸಿದ ಸಚಿವರು ಬಳಿಕ ಮಾತನಾಡಿ, ಚಾಮರಾಜನಗರ ಸಮಗ್ರ ಅಭಿವೃದ್ಧಿಗೆ ಸರ್ಕಾರ ತೀರ್ಮಾನಿಸಿದೆ ಎಂದರು.
ಸಾರ್ವಜನಿಕ ಉದ್ದೇಶಕ್ಕಾಗಿ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 192 ಎಕರೆ ಜಮೀನು ಮಂಜೂರು ಮಾಡಲಾಗಿದೆ, 7 ವಿದ್ಯಾರ್ಥಿಗಳ ನಿರ್ಮಾಣಕ್ಕಾಗಿ 111 ಕೋಟಿ ರೂ. ಅನುದಾನ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದರು. 
ಚಾಮರಾಜನಗರದಲ್ಲಿ ಔಷಧಿ ಉಗ್ರಾಣಕ್ಕಾಗಿ ಎರಡು ಜಮೀನು ಮಂಜೂರಾಗಿ 3.65 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ, ಅಮೃತ ಸರೋವರ ಯೋಜನೆಯಡಿ ಈಗಾಗಲೇ 15 ಕೆರೆ ಅಭಿವೃದ್ಧಿಪಡಿಸಲಾಗಿದ್ದು ಎರಡನೇ ಹಂತದಲ್ಲಿ 60 ಕೆರೆ ಅಭಿವೃದ್ಧಿ ಆಗಲಿದೆ ಎಂದರು. 
ಕೌಶಲ್ಯ ಕರ್ನಾಟಕ ಯೋಜನೆಯಡಿ ೬೬೦ ವಿದ್ಯಾರ್ಥಿಗಳಿಗೆ ಕೌಶಲ್ಯಬಿವೃದ್ದಿ ತರಬೇತಿ ನೀಡಲಾಗುವುದು. ಜಿಲ್ಲೆಯಾದಾದ್ಯಂತ ೭೩ ಸಮುದಾಯ ಭವನಗಳಿಗೆ ೭.೩೦ ಕೋಟಿ ಅನಯದಾನ ಬಿಡಯಗಡೆಯಾಗಿದೆ.ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ೧೩.೬೧ ಕೋಟಿ ಪರಿಹಾರ ಹಾಗೂ ಆಹಾರ ಕಿಟ್ ವಿತರಿಅಲಾಗಿದೆ ಎಂದರು. 
ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಎಸ್ಸಿ ಎಸ್ಟಿ ಉದ್ದಿಮೆದಾತ ಇತರ ಸಣ್ಣ ಕೈಗಾರಿಕೆ ಪ್ರೋತ್ಸಾಹಿಸಲು ೨೩೯ ಎಕರೆಯಲ್ಲಿ ೨೭೧ ನಿವೇಶನಗಳ ಅಬಿವೃದ್ದಿ ಕಾರ್ಯ ಪ್ರಗತಿಯಲ್ಲಿದೆ ಎಂದರು. 
ಜಲಶಕ್ತಿ ಅಬಿಯಾನದಡಿ ೨೬೦ ಕೆರೆ ಅಬಿವೃದ್ದಿ ೬೫೦ ಕಾಲುವೆ ಪುನಶ್ಚೇತನ,೧೩೦೦ ಚೆಕ್ ಡ್ಯಾಂ ಕಾಮಗಾರಿ ಕೈಗೊಳ್ಳಲಾಗಿದೆ.ಅಮೃತ ಸರೋವರ ಯೋಜನೆಯಡಿ ೧೫ ಕೆರೆ ಅಬಿವೃದ್ದಿ ಪಡಿಸಿದ್ದು ಎರಡನೆ ಹಂತದಲ್ಲಿ ೬೦ ಕೆರೆಗಳನ್ನ ಅಬಿವೃದ್ದಿಪಡಿಸಲಾಗುವುದು ಎಂದರು.
ಶಾಲಾ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕರಾಟೆ ಪ್ರದರ್ಶನ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾದಿಕಾರಿ ಚಾರುಲತಾ ಸೋಮಾಲ್,ಎಡಿಸಿ ಕಾತ್ಯಯಿನಿ, ಎಸ್ಪಿ ಶಿವಕುಮಾರ್,ಎಎಸ್ಪಿ ಸುಂದರ ರಾಜು,ಜಿಪಂ.ಸಿಇಓ ಗಾಯಿತ್ರಿ, ಸೇರಿದಂತೆ ಇನ್ನಿತರರು ಹಾಜರಿದ್ದರು.