(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಹನೂರು: (ಚಾಮರಾಜನಗರ) ಕುಡಿದ ಮತ್ತಿನಲ್ಲೇ ಅರಣ್ಯ ಇಲಾಖೆಯ ನೌಕರಕರ್ತವ್ಯ ನಿರ್ವಹಿಸಿದ್ದಲ್ಲದೆ, ಕೇಳಿದಷ್ಟು ಹಣ ನೀಡದಿದ್ದಲ್ಲಿ ಬಂದೂಕಿನಿಂದ ಸುಟ್ಟು ಹಾಕುವುದಾಗಿ ಬೆದರಿಕೆಯೊಡ್ಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ – ತಮಿಳುನಾಡು ರಾಜ್ಯಗಳ ಗಡಿಭಾಗದ ಪಾಲಾರ್ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆಯ ನೌಕರ ಮೋಹನ್ ಎಂಬುವರ ದುರ್ವತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರಣ್ಯ ಇಲಾಖೆ ನೌಕರ ಮೋಹನ್ ಪಾನಮತ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಚೆಕ್‌ಪೋಸ್ಟ್ ಬಳಿ ಬಂದ ಲಾರಿಯೊಂದರ ಚಾಲಕ ಮತ್ತು ಕ್ಲೀನರ್ ನಡುವಿನ ಹಣಕ್ಕೆ ಪೀಡಿಸುತ್ತಿರೊ ವಿಡಿಯೋ ವೈರಲ್ ಆಗಿದೆ.
ಪಾನಮತ್ತನಾಗಿದ್ದ ಮೋಹನ್ ಲಾರಿಯ ಚಾಲಕ ಮತ್ತು ಕ್ಲೀನರ್ ಬಳಿ ಬಂದು ಹಣಕ್ಕಾಗಿ ಪೀಡಿಸಿದ್ದಾನೆ.
ಈ ವೇಳೆ ಲಾರಿಯ ಚಾಲಕ ಈಗಾಗಲೇ 30ರೂ ನೀಡಿದ್ದೀನಲ್ಲ ಎಂದಿದ್ದಾನೆ. ಇದರಿಂದ ಕುಪಿತನಾದ ಮೋಹನ್ ಲಾರಿಯ ಕ್ಲೀನರನ್ನು ನಿನ್ನ ಹೆಸರು ಏನು ಎಂದು ಪ್ರಶ್ನಿಸಿದ್ದಾನೆ.
ಅದಕ್ಕೆ ಕ್ಲೀನರ್ ಸೈಯದ್ ಯಾಸಿನ್ ಎಂದು ಉತ್ತರಿಸಿದ್ದು, ನೀವು ಬಗ್ಗುವುದಿಲ್ಲವೇ? ಮುತ್ತಯ್ಯ ಅವರು ಇದ್ದರೆ ಬಗ್ಗುತ್ತೀರಾ ಎಂದು ಮರು ಪ್ರಶ್ನಿಸಿದ್ದಾನೆ.
ಏನು ಮಾಡಿಕೊಳ್ಳಲು ಆಗುವುದಿಲ್ಲ ಅಂತ ನೀವು ಹೇಳಿ ಕೆಟ್ಟದಾಗಿ ಮಾತನಾಡಿದ್ದಾನೆ.
ಬಂದೂಕಿನಿಂದ ಸುಟ್ಟಿಹಾಕುಬಿಡುತ್ತೇನೆ ಎಂದು ಲಾರಿಯ ಚಾಲಕ ಮತ್ತು ಕ್ಲೀನರ್ ಗೆ ಧಮ್ಮಿ ಹಾಕಿದ್ದಾನೆ.
ಈ ವೇಳೆ ಸುಟ್ಟುಹಾಕಿ ನೀವು ಎಂದಾಗ ಮೋಹನ ಮತ್ತು ಲಾರಿಯ ಚಾಲಕ, ಕ್ಲೀನರ್ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ನಡುವೆ ನೌಕರ ಮೋಹನ ಸಮವಸ್ತ್ರದಲ್ಲಿ ಇರುವವನ ಮೇಲೆ ಕೈ ಮಾಡುತ್ತೀರಾ, ನಾನು ಆರೀತಿ ತಿರುಗಿಸುತ್ತೇನೆ ಎಂದು ಪುನಃ ಧಮ್ಮಿ ಹಾಕಿದ್ದಾನೆ.
ಬಳಿಕ 100, 200 ಕೊಟ್ಟುಹೋಗಿ ಎಂದು ಮೋಹನ ಹೇಳಿದ್ದಾನೆ. ಅದಕ್ಕೆ ಏಕೆ ಕೊಡಬೇಕು ಎಂದು ಪ್ರಶ್ನಿಸಿದ್ದಕ್ಕೆ ಫಾರ್ಮಲಿಟಿಗೆ ಎಂದು ತಿಳಿಸಿದ್ದಾನೆ.
ಒಟ್ಟಾರೆ ಈ ವಿಡಿಯೋ ಕರ್ನಾಟಕ – ತಮಿಳುನಾಡು ಗಡಿಯ ಪಾಲಾರ್ ಚೆಕ್‌ಪೋಸ್ಟ್ ಅಲ್ಲಿ ಸಂಚರಿಸುವ ಲಾರಿಗಳಿಂದ ಹಣ ವಸೂಲು ಮಾಡುವ ವಿಚಾರಕ್ಕೆ ಸಂಬಂಧಪಟ್ಟಿದ್ದು.
ಅರಣ್ಯ ಇಲಾಖೆ ನೌಕರನ ವರ್ತನೆ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಗಡಿಜಿಲ್ಲೆ ಚಾಮರಾಜನಗರದ ಗಡಿಗಳಲ್ಲಿ ತಪಾಸಣೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ಅರಣ್ಯ ಇಲಾಖೆ ಹಾಗೂ ಕೆಲ ಚೆಕ್ ಪೊಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರೊ ಪೊಲೀಸರು ಲಂಚಕ್ಕೆ ಬೇಡಿಕೆ ಇಡುತ್ತಿರುವ ಅಂಶ ಮಾದ್ಯಮದಲ್ಲಿ ವರದಿಯಾಗಿದೆ.
ಆದರೂ ಹಿರಿಯ ಅದಿಕಾರಿಗಳು ಮೌನ ವಹಿಸಿರೋದು ನೋಡಿದರೆ ಅವರೂ ಪಾಲುದಾರರೆ ಎಂಬ ಅನುಮಾನ ಕಾಡುತ್ತಿದೆ.