ಕೊಡಗಿನಲ್ಲಿ ಸಿದ್ದು ಗೋ ಬ್ಯಾಕ್ ಅಭಿಯಾನ

ಮಡಿಕೇರಿ: ಕೊಡಗಿನಲ್ಲಿ ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಸಿದ್ದು ಗೋ ಬ್ಯಾಕ್ ಅಭಿಯಾನ ಆರಂಭವಾಗಿದೆ.

ಗೋಬ್ಯಾಕ್ ಎಂಬ ಪೋಸ್ಟರ್ ಅಭಿಯಾನದ ಮೂಲಕ ಆಕ್ರೋಶ ವ್ಯಕ್ತವಾಗಿದೆ.

ಕೊಡಗಿನಲ್ಲಿ ಹಿಂದುಗಳ ನರಮೇಧ ನಡೆಸಿದ ಟಿಪ್ಪುವಿನ ಶಿಷ್ಯ ಸಿದ್ಧು ಖಾನ್ ನಮಗೆ ಬೇಡ‌ ಎಂಬ ಅಭಿಯಾನ ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ನಡೆಯುತ್ತಿದೆ.

ಸಿದ್ದು ಗೊ ಬ್ಯಾಕ್  ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.

ಮಳೆ ಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಬೇಟಿ ನೀಡಲು ಸಿದ್ದು ಆಗಮಿಸಿದ್ದು ತೀವ್ರ ವಿರೋಧ ವ್ಯಕ್ತವಾಗಿದೆ.

ಕೊಡಗಿಗೆ ಆಗಮಿಸಿದ ಸಿದ್ದರಾಮಯ್ಯಗೆ ಕಾಂಗ್ರೇಸ್ ಕಾರ್ಯಕರ್ತರು  ಅದ್ದೂರಿ ಸ್ವಾಗತ ಕೋರಿದರು.

ಕೊಡಗ ಪ್ರವೇಶಿಸುತ್ತಿದ್ದಂತೆ ಸಿದ್ದುಗೆ ಹೂಮಾಲೆ ಹಾಕಿ ಬರ ಮಾಡಿಕೊಂಡರು.

ಆದರೂ ಸಿದ್ದು ಕೊಡಗಿಗೆ ಆಗಮಿಸುತ್ತಿದಂತೆ ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶದ ಕೂಗು ಮೊಳಗಿತು.

ಸಿದ್ದು ಸಾಗುವ ತಿತಿಮತಿ ಬಳಿ ಕಪ್ಪು ಭಾವುಟ  ಕೂಡಾ  ಪ್ರದರ್ಶನ ಮಾಡಲಾಯಿತು.