ಹುಲಿ ಉಗುರು ಮಾರಾಟ ಯತ್ನ: ಇಬ್ಬರ ಬಂಧನ

ಚಾಮರಾಜನಗರ: ಹುಲಿ ಉಗುರನ್ನ ಕದ್ದು ಮಾರಾಟ ಮಾಡಲು ಯತ್ನಿಸಿದ ಇಬ್ಬರನ್ನ ಸೆನ್ ಪೆÇಲೀಸರು ಬಂಧಿಸಿದ್ದಾರೆ.

ನಗರದ ಅಂಬೇಡ್ಕರ್ ಭವನದ ರಸ್ತೆಯಲ್ಲಿ ಹುಲಿ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಸೆನ್ ಪೆÇಲೀಸ್ ಠಾಣೆಯ ಸಿಪಿಐ ಮಹದೇವಶೆಟ್ಟಿರವರ ನೇತೃತ್ವದಲ್ಲಿ ಪಿಎಸ್‍ಐ ಮಾದೇಶ್ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಇಬ್ಬರು ಆಸಾಮಿಗಳನ್ನು ವಶಕ್ಕೆ ಪಡೆದಿದ್ದಾರೆ.

ಪರ್ಹದ್ ಉರ್ ರೆಹಮಾನ್ ಷರೀಪ್, ಯಾಸಿರ್ ಅರ್ಪತ್ ಎಂಬಿಬ್ಬರ ಆರೋಪಿಗಳ ಬಳಿ ಇದ್ದ 8 ಹುಲಿ ಉಗುರುಗಳನ್ನು ವಶಪಡಿಸಿಕೊಂಡು ಅರಣ್ಯ ಇಲಾಖೆ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರಾಜು, ಮಂಜುನಾಥ, ಜಗದೀಶ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಹೇಮಂತ್ ಕುಮಾರ್, ಜಗದೀಶ್ ರವರು ಪಾಲ್ಗೊಂಡಿದ್ದರು.