ರಾಂಚಿ: ಮಕ್ಕಳ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು ಮಾನವ ಕಳ್ಳಸಾಗಣೆ ಜಾಲವನ್ನು ರಾಂಚಿ ಪೊಲೀಸರು ಬಯಲಿಗೆಳೆದಿದ್ದಾರೆ.
ಜಾರ್ಖಂಡ್‍ನಿಂದ ಅಪಹರಿಸಿದ್ದ ನಾಲ್ವರು ಮಕ್ಕಳು ಮತ್ತು ಮಹಿಳೆಯನ್ನು ದೆಹಲಿಯಲ್ಲಿ ರಕ್ಷಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಫೆಬ್ರವರಿಯಿಂದ ಇಲ್ಲಿಯವರೆಗೆ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ರಾಜ್ಯದ ಒಟ್ಟು 49 ಜನರನ್ನು ಕಳ್ಳಸಾಗಣೆದಾರರ ಕಪಿಮುಷ್ಠಿಯಿಂದ ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಹಳಷ್ಟು ಕಳ್ಳಸಾಗಣೆದಾರರು ಜಾರ್ಖಂಡ್‍ನಲ್ಲಿ ಸಕ್ರಿಯರಾಗಿದ್ದಾರೆ.
ಯುವತಿಯರಿಗೆ ಉದ್ಯೋಗ, ಉತ್ತಮ ಜೀವನ ರೂಪಿಸಿಕೊಡುವುದಾಗಿ ಭರವಸೆ ನೀಡಿ ದೆಹಲಿಗೆ ಕರೆತಂದು ಮಾರಾಟ ಮಾಡುತ್ತಾರೆ.
ಮಕ್ಕಳನ್ನು ಬಿಕ್ಷಾಟಣೆಗೆ ಮತ್ತಿತರ ಅಕ್ರಮ ದಂಧೆಗೆ ನೂಕುತ್ತಾರೆ.
ಈಗ ರಕ್ಷಿಸಿರುವ ಮೂರು ಹುಡುಗಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಾಕುರ್ ಮತ್ತು ಸಾಹಿಬ್ ಗಂಜ್ ಜಿಲ್ಲಾಡಳಿತದ ಸಹಾಯದಿಂದ ಅವರುಗಳನ್ನು ತಮ್ಮ ಗ್ರಾಮಕ್ಕೆ ಕಳುಹಿಸಲಾಗುತ್ತಿದೆ ಎಂದು ನವದೆಹಲಿಯ ಸಮಗ್ರ ಪುನರ್ವಸತಿ ಸಂಪನ್ಮೂಲ ಕೇಂದ್ರದ ನೋಡಲ್ ಅಧಿಕಾರಿ ತಿಳಿಸಿದ್ದಾರೆ.
ಮಾನವ ಕಳ್ಳಸಾಗಾಣೆ ಜಾಲದ ಮೇಲೆ ಗುಪ್ತಚರ ಇಲಾಖೆ ಕಣ್ಣಿಟ್ಟಿದೆ ಆದರೂ ದಂದೆಕೊರರು ಕಳ್ಳ ಮಾರ್ಗದ ಮೂಲಕ ವಿದೇಶಕ್ಕೆ ಮಾರಾಟ ಮಾಡಿರುವ ಉದಾಹರಣೆಯೂ ಇದೆ.
ಇತ್ತೀಚೆಗೆ ಮಕ್ಕಳ ಕಳುವು ಪ್ರಕರಣ ಭಾರತದಲ್ಲಿ ಹೆಚ್ಚಾಗುತ್ತಿದೆ.