(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಸೇನೆ ಎಂದರೆ ದೇಶದ ಜನರಿಗೆ ಅಪಾರ ಗೌರವ, ಅಭಿಮಾನ..ಇದನ್ನೆ ಬಂಡವಾಳ ಮಾಡಿಕೊಂಡ ಚಾಮರಾಜನಗರ ಜಿಲ್ಲಾ ಪೊಲೀಸ್ ಆಡಳಿತ ಪ್ರಯಾಣಿಕರ ಬಳಿ ಸುಲಿಗೆಗೆ ನಿಂತಿದೆ!
ಚಾಮರಾಜನಗರ ಜಿಲ್ಲಾ ಪೊಲೀಸ್ ಆರ್ಮಿಯ ಸ್ಟ್ಯಾಂಪ್ ಮಾರಾಟ ಮಾಡಲು ಠಾಣೆಗಿಷ್ಟು ಅಂತ ನೀಡಲಾಗಿದೆ. ಅದನ್ನ ಪಡೆದ ಠಾಣೆಯ ಇನ್ಸ್ ಪೆಕ್ಟರ್ ತಮ್ಮ ಅದೀನ ಸಿಬ್ಬಂದಿಗಳಿಗೆ ಮಾರಾಟ ಮಾಡಲು ಒಪ್ಪಿಸಿಬಿಟ್ಟಿದ್ದಾರೆ.
ಸ್ಟ್ಯಾಂಪ್ ಪಡೆದ ಎಎಸ್ಐ ಹಾಗೂ ಒಬ್ಬ ಪೇದೆ ಬರುವ ವಾಹನಗಳನ್ನ ತಡೆದು ಇದು ಆರ್ಮಿ ಸ್ಟ್ಯಾಂಪ್ ಪಡೆಯಬೇಕು ಎಂದು ಸವಾರರಿಗೆ ಸಬೂಬು ಹೇಳುತ್ತಾರೆ..
ವಾಹನದಲ್ಲಿದ್ದವರು ಇದರ ಮುಖಬೆಲೆ ೧೦ ರೂ ಇದೆ ಎಂದರೆ ೫೦ ರೂ ಕೊಟ್ಟು ಪಡೆಯಲೇಬೇಕು ಎಂದು ಹೇಳುತ್ತಾರೆ..
ಆರ್ಮಿಗೆ ತಾನೆ, ಬೆಲೆ ಇರೊವಷ್ಟು ಪಡೆಯಿರಿ. ೧೦ ರೂ ಬದಲು ೫೦ ಪಡೆಯೋದೆಷ್ಟು ಸರಿ..ಇದು ಸೂಕ್ತವಲ್ಲ..ಸೈನಿಕರ ಹೆಸರು ಬಳಸಿ ಹೆಚ್ಚುವರಿ ವಸೂಲಿ ಯಾಕೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ನಿಮ್ ಠಾಣೆಯ ಇನ್ಸ್ ಪೆಕ್ಟರ್ ಅಥವಾ ಎಸ್ಪಿ ಅವರು ಹೇಳಿದ್ದಾರಾ ಎಂದರೆ ಹೌದು ಎಂದು ಉತ್ತರ ನೀಡಿದ್ದಾರೆ.
ಇಷ್ಟಕ್ಕೆ ಬಿಡದ ವಾಹನ ಸವಾರ ಯಾವ ಠಾಣೆ ಇನ್ಸ್ ಪೆಕ್ಟರ್ ಎಂದಾಗ ರಾಮಾಪುರ ಠಾಣೆ ಇನ್ಸ್ ಪೆಕ್ಟರ್ ನಂಜುಂಡಸ್ವಾಮಿ ಅವರೇ ಹೇಳಿದಾರೆ ಎಂಬ ಉತ್ತರ ಸಿಕ್ಕಿದೆ.
ಅಲ್ಲಾ ಸ್ವಾಮಿ...ಹೆಚ್ಚುವರಿ ತಗೊಳ್ಳಿ ಅಂತ ಎಸ್ಪಿ ಅವರೂ ಹೇಳಿದರಾ ಅಂದ್ರೆ ಹೌದು ಎಂದು ಉತ್ತರ ನೀಡಿದ್ದಾರೆ.
ವಾಹನ ಸವಾರ ಮುಖಬೆಲೆಗಷ್ಟೆ ಸ್ಟಾಂಪ್ ಪಡೆಯೋದು ಎಂದಾಗ, ಪಕ್ಕದಲ್ಲಿದ್ದ ಪೇದೆ, ನಿಮ್ಮ ವಾಹನದಲ್ಲಿ ಎಲ್ಲವೂ ಸರಿ ಇದಿಯೆನ್ರಿ ಎಂದು ಮರು ಪ್ರಶ್ನೆ ಮಾಡಿದ್ದಾರೆ.
ಹೌದು ಸ್ವಾಮಿ. ವಾಹನದ ದಾಖಲೆಯಿಂದ ಹಿಡಿದು ಹೆಲ್ಮೆಟ್ ವರೆಗೂ ಸರಿ ಇದೆ..ಯಾವ್ದು ಬೇಕು ಹೇಳಿ ತೋರಿಸೋಣ...ಸ್ಟ್ಯಾಂಪ್ ಪಡೆಯಲಿಲ್ಲ ಎಂಬ ಕಾರಣಕ್ಕೆ ವಾಹನ ಸವಾರರಿಗೆ ನಡು ರಸ್ತಯಲ್ಲಿ ಅಡ್ಡ ಹಾಕಿ ಕಿರುಕುಳ ನೀಡೊ ಜೊತೆಗೆ ಹೆಚ್ಚುವರಿ ವಸೂಲಿ ಮಾಡುವುದು ಸರಿಯೇ ಎಂದು ಛೇಡಿಸಿದ್ದಾರೆ.
ಪಕ್ಕದಲ್ಲಿದ್ದ ಇನ್ನೊಬ್ಬ ಸವಾರ, ಸಾರ್ ೧೦ ರು ಬೆಲೆ ೧೦೦ ಸ್ಟಿಕ್ಕರ್ ಅನ್ನ ಸೇರಿಸಿದರೆ ೧೦.೦೦೦ ರೂ ಆಗುತ್ತೆ. ಅದನ್ನ ಠಾಣಾ ಸಿಬ್ಬಂದಿಗಳೇ ನೀಡಿದರೆ ಅದು ದೇಶಪ್ರೇಮವಾಗಲಾರದೆ ಎಂದು ಹೇಳಿದ್ದಾರೆ.
ತಪಾಸಣೆ ನೆಪದಲ್ಲಿ ಬರೊ ವಾಹನಗಳಿಗೆ ಕೈವೊಡ್ಡೊ ಪೊಲೀಸ್ ಪೇದೆ ಸಮವಸ್ತ್ರ ನೀತಿ ಉಲ್ಲಂಘಿಸಿದ್ದಾರೆ ಜೊತೆಗೆ ನೇಮ್ ಪ್ಲೇಟ್ ಧರಿಸದೆ ಬೇಜವಬ್ದಾರಿತನ ಮೆರೆದಿದ್ದಾರೆ.
ಒಟ್ಟಾರೆ ದೇಶದ ಸೈನಿಕರ ಹೆಸರು ಹೇಳಿ ಒಂದೊಂದು ಮುಖಬೆಲೆಯ ಸ್ಟ್ಯಾಂಪ್ ಗೆ ಐದು ಪಟ್ಟು ಹೆಚ್ಚು ಮಾರಾಟ ಮಾಡಿ ಚಾಮರಾಜನಗರ ಜಿಲ್ಲಾ ಪೊಲೀಸರು ಹಗಲುದರೋಡೆಗೆ ಇಳಿದಿರೋದು ನಾಚಿಗೇಡಿತನದ ಸಂಗತಿ