ಚಲಿಸುತ್ತಿದ್ದ ರೈಲಿಗೆ ತಳ್ಳಿ ಪತ್ನಿಯ ಕೊಂದ ಪಾಪಿ ಪತಿ

ಥಾಣೆ: ಮಲಗಿದ್ದ ಪತ್ನಿಯನ್ನು ಎಬ್ಬಿಸಿ ಚಲಿಸುವ ರೈಲಿನ ಮುಂದೆ ತಳ್ಳಿ ಪಾಪಿ ಪತಿ ಕೊಂದ ಘಟನೆ ಪಾಲ್ಗಾರ್ ಜಿಲ್ಲೆಯ ವಾಸಾವಿ ರಸ್ತೆ ರೈಲುನಿಲ್ದಾಣದಲ್ಲಿ ನಡೆದಿದೆ.
ಪತ್ನಿ ಇಬ್ಬರು ಮಕ್ಕಳೊಂದಿಗೆ ಬಂದಿದ್ದ ವ್ಯಕ್ತಿ  ಮುಂಜಾನೆ 4 ಗಂಟೆ ಸುಮಾರಿಗೆ ಮಲಗಿದ್ದ ಪತ್ನಿಯನ್ನು ಎಬ್ಬಿಸಿ ರೈಲ್ವೇ ಪ್ಲಾಟ್‍ಫಾರಂ ಅಂಚಿಗೆ ಎಳೆದೊಯ್ದು ಹಳಿಗಳ ಮೇಲೆ ತಳ್ಳಿದ್ದಾನೆ.
ಇದೇ ವೇಳೆ ಬಂದ ಅವಧ್ ಎಕ್ಸ್‌ಪ್ರೆಸ್ ರೈಲು ಅಕೆಯ ಮೇಲೆ ಹರಿದು ದೇಹ ಛಿದ್ರಗೊಂಡಿದೆ.
ಹಳಿ ಮೇಲೆ ಶವ ಕಂಡು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ರೈಲ್ವೆ ಪೊಲೀಸರೇ ದಂಗಾಗಿದ್ದಾರೆ.
ನಂತರ ಈ ಬೀಕರ ಕೊಲೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 
ಘಟನೆ ನಡೆದ ನಂತರ ದುಷ್ಟ ತನ್ನ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಪರಾರಿಯಾಗುವುದು ಸಿಸಿಟಿವಿ ದೃಶ್ಯಾವಳಿಗಳಲ್ಲು ಕಂಡುಬಂದಿತ್ತು, 
ಆತ ನಂತರ ಮುಂಬೈನ ದಾದಗರ್ ರೈಲು ಹತ್ತಿ ಅಲ್ಲಿಂದ ಥಾಣೆಯ ಕಲ್ಯಾಣೆಗೆ ಹೋಗುತ್ತಿರುವುದನ್ನು ಖಾತರಿಪಡಿಕೊಂಡು ಕಾರ್ಯಾಚರಣೆ ನಡೆಸಲಾಯಿತು.
ತಡರಾತ್ರಿ ಥಾಣೆಯ ಭಿವಂಡಿ ಪಟ್ಟಣದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಹಿಳೆಯು ತನ್ನ ಪತಿಯ ಸ್ನೇಹಿತನೊಂದಿಗೆ ಎರಡು ದಿನಗಳ ಕಾಲ ಹೊರಗೆ ಹೋಗಿದ್ದಳು, ಇದು ಅವನಿಗೆ ಕಿರಿಕಿರಿ ಉಂಟುಮಾಡಿತು.
ಮತ್ತು ಇಬ್ಬರೂ ಜಗಳವಾಡಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ. 
ಆಕೆಯನ್ನು ಕೊಲ್ಲುವ ಪಿತೂರಿ ಮಾಡಿ ಊರಿಗೆ ಕರೆದೊಯ್ಯುವ ನಪದಲ್ಲಿ ಈ ಹೀನ ಕೃತ್ಯ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಕಾರ್ಯವನ್ನು ರೈಲ್ವೆ ಉಪ ಪೊಲೀಸ್ ಆಯುಕ್ತ ಸಂದೀಪ್ ಬಾಜಿಬಖ್ರೆ ಶ್ಲಾಘಿಸಿದ್ದಾರೆ