ತುಮಕೂರು : ಗೊರವನಹಳ್ಳಿಯಿಂದ ತೀತಾಗೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆಯಿಂದಾಗಿ ಕುಸಿದು ಬಿದ್ದಿದ್ದು, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೂದಲೆಳೆಯಲ್ಲಿ ಪಾರಾಗಿದ್ದಾರೆ.
ಪರಮೇಶ್ವರ್ ಭೇಟಿ ನೀಡಿ ಇತ್ತ ಬಂದ ತಕ್ಷಣ ತೀತಾ ಸೇತುವೆ ಕುಸಿದಿದೆ.
ಕೊರಟಗೆರೆ ತಾಲೂಕಿನ ತೀತಾ ಸೇತುವೆ ಗುರುವಾರ ರಾತ್ರಿಯ ಮಳೆಗೆ ಮುಂಜಾನೆ ಅರ್ಧ ಕುಸಿದಿತ್ತು.
ಕುಸಿತದ ಹಿನ್ನೆಲೆ ಸ್ಥಳ ವೀಕ್ಷಿಸಲು ಪರಮೆಶ್ವರ್ ಶುಕ್ರವಾರ ಸಂಜೆ ಆಗಮಿಸಿದ್ದರು. ಪರಮೇಶ್ವರ್ ಅವರು ಸೇತುವೆ ಮೇಲೆಯೇ ನಿಂತು ಕುಸಿತವಾಗಿದ್ದ ಭಾಗವನ್ನು ವೀಕ್ಷಿಸಿದರು.
ವೀಕ್ಷಣೆ ಬಳಿಕ ಪರಮೇಶ್ವರ್ ಅಲ್ಲಿಂದ ಮುಂದೆ ಹೋಗಿದ್ದರು. ಅವರು ಅತ್ತ ಹೋದ ಬಳಿಕ ಸೇತುವೆಯ ಇನ್ನೊಂದು ಭಾಗವೂ ಕುಸಿಯಿತು.
ಪರಮೇಶ್ವರ್ ನಿಂತಿದ್ದ ಜಾಗವೂ ಕುಸಿದಿದ್ದು, ಅದೃಷ್ಟವಶಾತ್ ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರ
ಸೇತುವೆ ಕುಸಿದಿರುವುದರಿಂದ ಗೊರವನಹಳ್ಳಿಯಿಂದ ತೀತಾಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ.
ಪರ್ಯಾಯ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಲಾಗಿದೆ.