ಮಂಡ್ಯ: ಯಾವುದೇ ಯೋಜನೆಯಾಗಲಿ ಟೆಂಡರ್ ಆದ ಕೂಡಲೇ ಕಮಿಷನ್ ಇಲ್ಲದೆ ಕೆಲಸ ನಡೆಯುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ಪರೋಕ್ಷವಾಗಿ ಜೆಡಿಎಸ್ ಶಾಸಕರ ವಿರುದ್ದ ಕಮಿಷನ್ ಆರೋಪ ಮಾಡಿದ್ದರು.
ಟೆಂಡರ್ ಆಗ್ತಿದಂತೆ ಕಮಿಷನ್ ಕೇಳುತ್ತಾರೆ ಕಮಿಷನ್ ಕೊಡುವವರೆಗೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ನನಗೆ ಗುತ್ತಿಗೆದಾರರಿಂದ ನೇರವಾಗಿ ಮಾಹಿತಿ ಬಂದಿದೆ ಎಂದು ಸುಮಲತಾ ಆರೋಪಿಸಿದರು.
ಟೆಂಡರ್ ಆಗ್ತಿದ್ದ ಹಾಗೆ ಕಮಿಷನ್ ಕೇಳುತ್ತಾರೆ. ಕಮಿಷನ್ ಕೊಡುವವರೆಗೂ ಕೆಲಸ ಮಾಡೋಕೆ ಬಿಡಲ್ಲ. ಸೆಂಟ್ರಲ್ ಫಂಡ್ ಗೂ ಶಾಸಕರು ಕೈ ಹಾಕುತ್ತಾರೆ ಎಂದು ಆರೋಪಿಸಿದರು.
ಆದರೆ ಈ ಬಗ್ಗೆ ಗುತ್ತಿಗೆದಾರರು ಮುಂದೆ ಬಂದು ಹೇಳಲು ಹೆದರುತ್ತಿದ್ದಾರೆ.
ಒಂದು ವೇಳೆ ಇದನ್ನು ಬಾಯಿ ಬಿಟ್ಟರೆ ತಮ್ಮನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಗುತ್ತಿಗೆದಾರರು ಹೆದರಿಕೊಳ್ಳುತ್ತಿದ್ದಾರೆ ಎಂಬುದಾಗಿ ದೂರಿದರು. ಕಮಿಷನ್ ಕೇಳುವುದು ಅಪರಾಧ, ಎಷ್ಟು ಅಂತಾ ಹೋರಾಟ ಮಾಡೋದು. ವ್ಯವಸ್ಥೆ ಬದಲಿಸಲು ಒಬ್ಬರಿಂದ ಸಾಧ್ಯಾವೆ ಎಂದು ಸುಮಲತಾ ಬೇಸರದಲ್ಲೇ ಪ್ರಶ್ನಿಸಿದರು.