ಎರಡು ಕೋಮಿನ ನಡುವೆ ಘರ್ಷಣೆ,ಪೊಲೀಸರಿಂದ ಲಾಠಿಪ್ರಹಾರ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ       
ಚಾಮರಾಜನಗರ: ಸೈಕಲ್ ವೀಲಿಂಗ್ ವಿಚಾರವಾಗಿ ಎರಡು ಕೋಮುಗಳ ನಡುವೆ ಶನಿವಾರ ರಾತ್ರಿ ನಗರದಲ್ಲಿ ಘರ್ಷಣೆ ನಡೆದಿದೆ.
ಘರ್ಷಣೆ ನಡೆಷ ತಕ್ಷಣವೇ ಪೊಲೀಸರು ಮಧ್ಯೆ ಪ್ರವೇಶಿಸಿ ಲಘು ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿದ್ದಾರೆ.
ಚಾಮರಾಜನಗರದ ಸಂತೇಮರಹಳ್ಳಿ ವೃತ್ತದ ಬಳಿ ರಾತ್ರಿ 9ರ ಸುಮಾರಿಗೆ ಗಲಾಟೆ ನಡೆದಿದೆ. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಎರಡೂ ಗುಂಪುಗಳು ಯುವಕರು ಕೈ ಕೈ ಮಿಲಾಯಿಸಿವೆ. ಕೆಲವರು ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲನ್ನೂ ತೂರಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
 '15 ವರ್ಷದ ಅನ್ಯಕೋಮಿನ ಹುಡುಗನೊಬ್ಬ ಸೈಕಲ್ ವೀಲಿಂಗ್ ಮಾಡುತ್ತಿರುವಾಗ ರಸ್ತೆಯಲ್ಲಿ ಹೋಗುತ್ತಿದ್ದ ಇನ್ನೊಂದು ಸಮುದಾಯದ ಯುವಕನಿಗೆ ತಾಗಿದೆ. ಇದನ್ನು ಪ್ರಶ್ನಿಸಿದ್ದ ಯುವಕ, ಹುಡುಗನನ್ನು ಗದರಿಸಿ ಕೈಯಲ್ಲಿ ಹೊಡೆದು ಕಳಿಸಿದ್ದ. ಈ ವಿಚಾರವನ್ನು ಹುಡುಗ ತನ್ನ ಸಮುದಾಯವರಿಗೆ ಹೇಳಿದಾಗ ಅವರು ಗುಂಪು ಗೂಡಿಕೊಂಡು ಬಂದಿದ್ದಾರೆ. ಇವರೂ ಗುಂಪು ಸೇರಿದ್ದರು. ಈ ವೇಳೆ ಘರ್ಷಣೆಯಾಗಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ‌. 
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಗುಂಪನ್ನು ಚದುರಿಸಿ,ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ತಂದಿದ್ದಾರೆ
ನಗರದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಘಟನೆಯ ಬಳಿಕ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸ್ ಸಿಬ್ಬಂದಿ ನಗರದಾದ್ಯಂತ ಗಸ್ತು ತಿರುಗುತ್ತಿದ್ದಾರೆ. 
ಪಟ್ಟಣದಲ್ಲಿ ದಿನೆ ದಿನೆ ಬೈಸಿಕಲ್ ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದರೂ ಪೊಲೀಸರು ಮಾತ್ರ ನಮಗೇನು ಸಂಬಂದವಿಲ್ಲ ಎಂಬಂತೆ ಇದ್ದದ್ದು ಇಂದಿನ ಸೈಕಲ್ ವ್ಹೀಲಿಂಗ್ ಇಂದ ಜನರೆ ಬುದ್ದಿ ಕಲಿಸಿದಂತಾಗಿದೆ. ಪೊಲೀಸರ ನಿಷ್ಕ್ರಿಯತೆ ಕೂಡ ಇಂತಹ ಅವಕಾಶಗಳಿಗೆ ಕಾರಣ ಕೂಡ ಆಗಿದೆ ಎಂದರೆ ತಪ್ಪಾಗಲಾರದು.