ಚಿತ್ರದುರ್ಗ: ಮುರಾಘಾ ಮಠದ ಶಿವಮೂರ್ತಿ ಶ್ರೀಗಳ ವಿರುದ್ಧ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ 5ನೇ ಆರೋಪಿ ವಕೀಲ ಗಂಗಾಧರಯ್ಯ ಪೊಲೀಸರಿಗೆ ಶರಣಾಗಿದ್ದಾರೆ.
ಪ್ರಕರಣದ 5ನೇ (A5) ಆರೋಪಿಯಾಗಿರುವ ವಕೀಲ ಗಂಗಾಧರಯ್ಯ ಮಂಗಳವಾರ ಪೊಲೀಸರಿಗೆ ಶರಣಾಗಿದ್ದು, ಚಿತ್ರದುರ್ಗದ ಡಿವೈಎಸ್ಪಿ ಕಚೇರಿಯಲ್ಲಿ ಗಂಗಾಧರಯ್ಯ ವಿಚಾರಣೆ ನಡೆಯುತ್ತಿದೆ.
ಪ್ರಕರಣದ 3ನೇ ಆರೋಪಿಯ ಆಗಿರುವ ಮಠದ ಉತ್ತರಾಧಿಕಾರಿ ಮತ್ತು 4ನೇ ಆರೋಪಿ ಪರಮಶಿವಯ್ಯ ಈವರೆಗೆ ಪೊಲೀಸರಿಗೆ ಸಿಕ್ಕಿಲ್ಲ.
ಹೀಗಾಗಿ ಅವರ ಬಂಧನಕ್ಕಾಗಿ ಹುಡುಕಾಟ ಮುಂದುವರಿದಿದೆ. ಪ್ರಕರಣದ ಮೊದಲಬಾರೋಪಿ ಮುರುಘಾ ಶ್ರೀ ನ್ಯಾಯಾಂಗ ಬಂಧನದಲ್ಲಿದ್ದಾರೆ.