ಶಿವಮೊಗ್ಗ: ಜಗತ್ತಿನ ತೀವ್ರಗಾಮಿ ಉಗ್ರ ಸಂಘಟನೆ ಐಸಿಸ್ ಜೊತೆ ಸಂಪರ್ಕ ಹೊಂದಿರುವ ಶಿವಮೊಗ್ಗದ ಇಬ್ಬರು ಉಗ್ರರಿಗೆ ಪೋಲಿಸರು ಸಖತ್ ಡ್ರಿಲ್ ಮಾಡುತ್ತಿದ್ದು, ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ.
ಶಿವಮೊಗ್ಗದ ಸಿದ್ದೇಶ್ವರ ನಗರದ ಸೈಯದ್ ಯಾಸಿನ್ ಹಾಗೂ ಮಂಗಳೂರು ಮೂಲದ ಮಾಜ್ ಮುನಿರ್ ಅಹಮ್ಮದ್ ನನ್ನು ಪೋಲಿಸರು ವಿಚಾರಣೆಗೊಳಪಡಿಸಿ ಗ್ರಿಲ್ ಮಾಡಿದ್ದಾರೆ.
ಶಿವಮೊಗ್ಗದ ಪುರಲೆ ಸಮೀಪ ತುಂಗಾ ನದಿ ದಡದಲ್ಲಿ ಇವರು ಮತ್ತೊಬ್ಬ ಶಂಕಿತ ಉಗ್ರ ತೀರ್ಥಹಳ್ಳಿಯ ಶಾರಿಕ್ ಜೊತೆ ಪಟಾಕಿ ಬಾಕ್ಸ್ ಗಳಿಂದ ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.
ಇದರ ಅನುಭವದ ಆಧಾರದ ಮೇಲೆ ರಿಯಲ್ ಬ್ಲಾಸ್ಟ್ ಮಾಡಲು ಉಹ್ರರು ಸ್ಕೆಚ್ ಹಾಕಿದ್ದರು.
ಇದರ ಅನುಭವದ ಆಧಾರದ ಮೇಲೆ ರಿಯಲ್ ಬ್ಲಾಸ್ಟ್ ಮಾಡಲು ಸ್ಕೆಚ್ ಹಾಕಿದ್ದರು.
ಶಿವಮೊಗ್ಗ, ಮಂಗಳೂರು ಹಾಗೂ ಕೇರಳದಲ್ಲಿ ರಿಯಲ್ ಬ್ಲಾಸ್ಟ್ ಮಾಡಲು ಈ ಭೂಪರು ಎಲ್ಲಾ ತಯಾರಿ ಮಾಡಿಕೊಂಡಿದ್ದರು ಎಂಬ ಆಘಾತಕಾರಿ ವಿಚಾರಗಳು ಬಹಿರಂಗಗೊಂಡಿದೆ.
ಹಾಗಾಗಿ ಇಬ್ಬರು ಉಗ್ರರನ್ನು ಪೋಲಿಸರು ಟ್ರಯಲ್ ಬ್ಲಾಸ್ಟ್ ನಡೆಸಿದ ಸ್ಥಳ ಹಾಗೂ ಅವರ ಮನೆಗೆ ಕರೆತಂದು ಮಹಜರು ನಡೆಸಿದರು.
ಈ ಮೂವರು ಶಂಕಿತ ಉಗ್ರರು ಒಟ್ಟಿಗೆ ಪಿಯುಸಿ ಮುಗಿಸಿ ಎಂಜಿನಿಯರಿಂಗ್ ಗೆ ಸೇರಿದ್ದರು.
ಎಂಜಿನಿಯರಿಂಗ್ ವ್ಯಾಸಂಗದ ಜೊತೆಗೆ ಬಾಂಬ್ ತಯಾರಿಕೆಯ ಬಗ್ಗೆ ಸಂಶೋಧನೆ ಮಾಡುತ್ತಿದ್ದರು. ಜೊತೆಗೆ ಐಸಿಸ್ ಕಮಾಂಡರ್ ಗಳ ಸೂಚನೆ ಮೇರೆಗೆ ವಿಧ್ವಂಸಕ ಕೃತ್ಯ ನಡೆಸಲು ಸ್ಕೆಚ್ ಹಾಕಿದ್ದರು.
ಇದನ್ನೆಲ್ಲಾ ನೋಡುತ್ತಿದ್ದರೆ ಕರ್ನಾಟಕ ಉಗ್ರರ ಸೇಫ್ ಸಿಟಿಯಾಗುತ್ತಿದೆಯಾ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.