ಶ್ರೀರಂಗಪಟ್ಟಣದ ಐತಿಹಾಸಿಕ ದಸರಾ ಉದ್ಘಾಟನೆಗೆ ಸುತ್ತೂರುಶ್ರೀಗಳಿಗೆ ಆಹ್ವಾನ

ಬೆಂಗಳೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸೆ.28ರಂದು ನಡೆಯುವ ಐತಿಹಾಸಿಕ ವೈಭವ ದಸರಾ ಉದ್ಘಾಟನೆಗೆ ಶ್ರೀ ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಆಹ್ವಾನಿಸಲಾಯಿತು.

ಸಚಿವರಾದ ಡಾ.ಕೆ.ಸಿ.ನಾರಾಯಣ ಗೌಡ ಹಾಗೂ ಕೆ.ಗೋಪಾಲಯ್ಯ ಅವರು ಅಧಿಕೃತವಾಗಿ ಶ್ರೀಗಳನ್ನು ಆಹ್ವಾನಿಸಿದರು.

ಶುಕ್ರವಾರ ಬೆಂಗಳೂರಿನ ಬನಶಂಕರಿಯಲ್ಲಿರುವ ಶಾಕಾ ಮಠದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ  ಶ್ರೀಗಳನ್ನು ಭೇಟಿ ಮಾಡಿ ದಸರಾ ಉದ್ಘಾಟನೆಗೆ ಆಹ್ವಾನ ನೀಡಿದರು.

ಇದೇ ವೇಳೆ ಶ್ರೀರಂಗಪಟ್ಟಣ ದಸರಾ ಪೋಸ್ಟರ್‌ಗಳನ್ನು ಶ್ರೀಗಳು ಬಿಡುಗಡೆಗೊಳಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಎಸ್.ಅಶ್ವತಿ, ಸಿಇಒ ಶಾಂತಾ ಹುಲ್ಮನಿ, ವಿಭಾಗಾಧಿಕಾರಿ ಶಿವಾನಂದ ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.