ಪಿಎಫ್ಐ ಕಾರ್ಯಕರ್ತರಿಬ್ಬರ ಬಂಧನ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ    

ಚಾಮರಾಜನಗರ: ಚಾಮರಾಜನಗರದಲ್ಲಿ ಪೊಲೀಸರು ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿ ಇಬ್ಬರು ಪಿಎಫ್ ಐ ಕಾರ್ಯಕರ್ತರನ್ನ ಬಂಧಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಚಾಮರಾಜನಗರ ಪಿಎಫ್ಐ ಜಿಲ್ಲಾಧ್ಯಕ್ಷ ಕಪಿಲ್ ಅಹ್ಮದ್, ಕಾರ್ಯದರ್ಶಿ ಸುಯೇಬ್ ಉಲ್ಲಾಖಾನ್ ಅವರನ್ನು ಮದ್ಯರಾತ್ರಿ ಬಂದಿಸಿ ಸಿಮ್ಸ್ ಅಲ್ಲಿ ಇಬ್ಬರ ಆರೋಗ್ಯ ತಪಾಸಣೆ ಮಾಡಿ ತಹಶಿಲ್ದಾರ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಅವರ ಸೂಚನೆ ಮೇರೆಗೆ ನ್ಯಾಯಾಂಗ ಬಂದನಕ್ಕೆ ಚಾಮರಾಜನಗರ ಪೊಲೀಸರು ಒಪ್ಪಿಸಿದ್ದಾರೆ.

ಎನ್ಐಎ ಸೂಚನೆ ಹಾಗೂ ಕೇಂದ್ರ ಗುಪ್ತಾಚಾರ ಇಲಾಖಾ ಮಾಹಿತಿ ಆಧರಿಸಿ ಮುಂಜಾಗ್ರತಾ ಕ್ರಮವಾಗಿ ಇಬ್ಬರನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಚಾಮರಾಜನಗರ ಜಿಲ್ಲಾ ಎಸ್ಪಿ ಶಿವಕುಮಾರ್ ಜೀನ್ಯೂಸ್ 5ಗೆ ತಿಳಿಸಿದ್ದಾರೆ.