ಮೈಸೂರು: ಚಾಕುವಿನಿಂದ ಇರಿದು ಯುವಕನೊಬ್ಬನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ತಡರಾತ್ರಿ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಾಂತಿನಗರದ ಸಧಾಖತ್(28) ಕೊಲೆಯಾದ ದುರ್ದೈವಿ.
ಸ್ನೇಹಿತನ ಮೂಲಕ ಸಧಾಖತ್ ನನ್ನು ಕರೆಸಿಕೊಂಡು ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಜರಿ ಬಳಿ ಚಾಕುವಿನಿಂದ ಇರಿದು ಕೊಂದಿದ್ದಾರೆ.
ಸ್ನೇಹಿತ ಹನೀಫ್ ಎಂಬುವರ ಮೂಲಕ ಮನೆಯಿಂದ ಕರೆಸಿಕೊಂಡು ಈ ದುಷ್ಕೃತ್ಯ ವೆಸಗಿದ್ದಾರೆ.
ಹನೀಫ್ ಗೂ ಸಹ ಚಾಕುವಿನಿಂದ ಇರಿಯಲಾಗಿದೆ.ಆದರೆ ಆತ ಅಪಾಯದಿಂದ ಪಾರಾಗಿದ್ದಾರೆ.
ಆಟೋಗಳಿಗೆ ರೆಕ್ಸಿನ್ ಹೊಲೆಯುವ ಸಧಾಖತ್ ಗುರುವಾರ ರಾತ್ರಿ ಎಂದಿನಂತೆ ಮನೆಗೆ ಹೋಗಿದ್ದಾರೆ.
ಕಿರಾತಕರು10 ಗಂಟೆ ನಂತರ ಸ್ನೇಹಿತನ ಮೂಲಕ ಮೊಬೈಲ್ ನಲ್ಲಿ ನಿರಂತರವಾಗಿ ಸಂಪರ್ಕಿಸಿ ಮಾತನಾಡಲು ಬರುವಂತೆ ಒತ್ತಾಯಿಸಿದ್ದಾರೆ.
ಕೊನೆಗೆ ಸ್ನೇಹಿತ ಹನೀಫ್ ಮೂಲಕ ಒತ್ತಡ ಹೇರಿ ಕರೆಸಿಕೊಂಡಿದ್ದಾರೆ.
ಗುಜರಿ ಬಳಿ ಬರುತ್ತಿದ್ದಂತೆಯೇ ಮೂರು ಮಂದಿ ಸದಾಖತ್ ಮೇಲೆ ಎರಗಿದ್ದಾರೆ.
ತೀವ್ರವಾಗಿ ಗಾಯಗೊಂಡ ಸದಾಖತ್ ನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರೂ.ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸ್ನೇಹಿತ ಹನೀಫ್ ರನ್ನ ಲಷ್ಕರ್ ಠಾಣೆ ಪೊಲೀಸರು ವಿಚಾರಣೆ ಮಾಡಿದ್ದಾರೆ.
ಹಂತಕರ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ ಬೀಸಿದ್ದಾರೆ.