ಕೆಂಚಮ್ಮನ ಕೆರೆಯನ್ನು ಇಕೋ ಪ್ರವಾಸೋದ್ಯಮಕ್ಕೆ ಸೇರಿಸುವುದು ನಮ್ಮ ಆಶಯ -ಸಚಿವ ಬಿ.ಸಿ.ಪಾಟೀಲ

ಹಾವೇರಿ: ಮದಗಮಾಸೂರು ಕೆರೆಯನ್ನು ಇಕೋ ಪ್ರವಾಸೋದ್ಯಮಕ್ಕೆ ಸೇರಿಸುವುದು ನಮ್ಮ ಆಶಯವಾಗಿದೆ. ಕೆರೆಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಶ್ರಮಿಸುವುದಾಗಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ ಹೇಳಿದರು.
ಮಂಗಳವಾರ ಐತಿಹಾಸಿಕ ಪ್ರಸಿದ್ಧ ರಟ್ಟಿಹಳ್ಳಿ -ಹಿರೇಕೆರೂರಿನ “ಮದಗಮಾಸೂರು ಕೆರೆ” (ಕೆಂಚಮ್ಮನ ಕೆರೆ)ಗೆ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ ಬಣಕಾರ ಅವರೊಂದಿಗೆ ಬಾಗಿನ ಅರ್ಪಿಸಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2018-19 ಸಾಲಿನಲ್ಲಿ ಎಡಬಲದಂಡೆಗೆ ರೂ.25 ಕೋಟಿ ಅಭಿವೃದ್ಧಿಗೆ ಇಡಲಾಗಿತ್ತಾದರೂ ಕೋವಿಡ್ ಕಾರಣದಿಂದ ಹಣದ ಕೊರತೆಯಾಗಿದೆ. ರೂ. ಐದು ಕೋಟಿ ಅನುದಾನದಲ್ಲಿ ಕೆರೆಯ ಹೂಳು ತೆಗೆಯುವುದು, ಎಡಬಲ ದಂಡೆಗಳನ್ನು ನವೀಕರಿಸಿ ಕೆರೆಯನ್ನು ಅಭಿವೃದ್ಧಿ ಮಾಡಿ ಕ್ಷೇತ್ರದ ರೈತರು ಹಾಗೂ ಜನತೆಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಿಪ್ಪಾಯಿಕೊಪ್ಪದ ಮೂಕಪ್ಪ ಶಿವಯೋಗಿಮಠದ ವಿರೂಪಾಕ್ಷ ಸ್ವಾಮಿಜಿ, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಸುಮಿತ್ರಾ ಪಾಟೀಲ, ಹಿರೇಕೆರೂರು ತಾಲೂಕ ಪಂಚಾಯತ್ ಅಧ್ಯಕ್ಷ ರಾಜು ಬಣಕಾರ, ರಟ್ಟಿಹಳ್ಳಿ ತಾಲೂಕ ಪಂಚಾಯತ್ ಅಧ್ಯಕ್ಷ ಡಿಳ್ಳೆಪ್ಪ ಹಳ್ಳಳ್ಳಿ, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಆರ್.ಎನ್.ಗಂಗೋಳ, ಧಾರವಾಡ ಕೆ.ಎಂ.ಎಫ್ ನಿರ್ದೇಶಕರಾದ ಹನುಮಂತಗೌಡ ಬರಮಣ್ಣನವರ, ಹೆಸ್ಕಾಂ ಇಂಜಿನೀಯರ್ ರಾಜು ಮರಿಗೌಡರ, ಸಿ.ಪಿ.ಐ ಮಂಜುನಾಥ ಪಂಡಿತ, ಪಿ.ಎಲ್.ಡಿ ಬ್ಯಾಂಕ ನಿರ್ದೇಶಕ ಆನಂದ ಹಾದಿಮನಿ, ಪಿ.ಡಬ್ಲೂ ಇಂಜೀನಿಯರ್ ಎಸ್.ವಿ ಪುರಾಣಿಕ್, ಷಣ್ಮುಖ ಮಳಿಮಠ, ದೇವರಾಜ ನಾಗಣ್ಣನವರ, ಗಣೇಶ ವೆರಣಿಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.