ಮುರುಘಾ ಮಠದಲ್ಲಿದ್ದ ಗಣ್ಯರ ಫೋಟೊಗಳು ಕಳವು

ಚಿತ್ರದುರ್ಗ: ಚಿತ್ರದುರ್ಗ ಮುರುಘಾ ಮಠದಲ್ಲಿದ್ದ ಮುರುಘಾ ಸ್ವಾಮೀಜಿ ಫೋಟೋಗಳು ಮಾಯವಾಗಿವೆ.

ಮಠದ ರಾಜಾಂಗಣದಲ್ಲಿದ್ದ 47 ಫೋಟೋಗಳನ್ನು ರಾತ್ರಿ ಕಳವು ಮಾಡಲಾಗಿದೆ.

ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದ ಸಂದರ್ಭದಲ್ಲಿನ ಗಣ್ಯರ ಫೋಟೋಗಳು‌ ಕಳುವಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಕ್ಟೋಬರ್ 5 ನೇ ತಾರೀಖು ಮದ್ಯರಾತ್ರಿ ಫೋಟೋಗಳು ಕಳುವಾಗಿವೆ.

SJM ವಿದ್ಯಾಪೀಠದ ಕಾರ್ಯದರ್ಶಿ ವಸ್ತ್ರಮಠ ಅವರು  ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಅಣ್ಣಾ ಹಜಾರೆ, ದಲೈ ಲಾಮ, ಮೇಧಾ ಪಾಟ್ಕರ್, ಸ್ವಾಮಿ ಅಗ್ನಿವೇಶ್, ಪಿಟಿ ಉಷಾ , ನಾರಾಯಣಮೂರ್ತಿ, ಬಿಎಸ್ ವೈ, ಅಮಿತ್ ಶಾ, ದೇವೇಗೌಡರು ಸೇರಿದಂತೆ ಹಲವು ರಾಜಕೀಯ ನಾಯಕರ ಜೊತೆ ಮುರುಘಾ ಸ್ವಾಮಿ ಇದ್ದ ಫೋಟೋಗಳು ಕಳುವಾಗಿದೆ.

ಪೋಕ್ಸೋ ಪ್ರಕರಣದಲ್ಲಿ ಮುರುಘಾ ಸ್ವಾಮಿ ಜೈಲು ಸೇರಿರುವ ಕಾರಣ, ಮಠದ ಕೆಲವು ನೌಕರರು ಈ ಕೃತ್ಯ ಎಸಗಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ.

ಶರಣ ಸಂಸ್ಕೃತಿ ಉತ್ಸವ ಸಂದರ್ಭದಲ್ಲೇ ಮುರುಘಾ ಶ್ರೀ ಫೋಟೋ ಕೂಡ ಕಳವಾಗಿದೆ.

ಫೋಟೋಗಳನ್ನು ಕದ್ದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಬ್ಬರು ವಾಹನವೊಂದರಲ್ಲಿ ಫೋಟೋಗಳನ್ನು ಕದ್ದೊಯ್ಯುತ್ತಿರುವ ಕೃತ್ಯ ಬಯಲಾಗಿದ್ದು ಪೊಲೀಸರು ಸಿಸಿಟಿವಿ ಪುಟೇಜ್ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.