ಜಿಂಕೆ ಮಾಂಸ ಸಾಗಿಸುತ್ತಿದ್ದ ಇಬ್ಬರ ಬಂಧನ

ಮೈಸೂರು: ಅಕ್ರಮವಾಗಿ ಜಿಂಕೆ ಭೇಟೆಯಾಡಿ ಬೈಕ್ ನಲ್ಲಿ ಮಾಂಸ ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂಧಿ ಸೆರೆ ಹಿಡಿದಿದ್ದಾರೆ.

ಎಚ್.ಡಿ.ಕೋಟೆ ತಾಲೋಕಿನ ಬಸಾಪುರ ಗ್ರಾಮದ ಪ್ರಸಾದ್ ಮತ್ತು  ಮುನಿಯಪ್ಪ ಬಂಧಿತ ಆರೋಪಿಗಳು.

ತಲೆ ಮರೆಸಿಕೊಂಡಿರುವ ಇತರ ಆರೋಪಿಗಳ ಬಂಧನಕ್ಕೆ ಅರಣ್ಯ ಇಲಾಖೆ ಸಿಬ್ಬಂಧಿ ಜಾಲ ಬೀಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂರಕ್ಷಣಾಧಿಕಾರಿ ಡಾ.ರವೀಶ್ ಕುಮಾರ್ ಮತ್ತು ಹುಲಿ ಸಂರಕ್ಷಿತ ದಳ ಹ್ಯಾಂಡ್ ಪೋಸ್ಟ್ ಮತ್ತು ಹೆಡಿಯಾಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಎನ್.ಬೇಗೂರು ವನ್ಯಜೀನಿ ವಲಯದ ಕಳಸೂರು ಅರಣ್ಯ ತನಿಖಾ ಠಾಣೆ ಬಳಿ  ಅಕ್ರಮವಾಗಿ ಸಾಗಿಸುತ್ತಿದ್ದ 8 ಕೆಜಿ ಜಿಂಕೆ ಮಾಂಸದ ಸಮೇತ ದ್ವಿಚಕ್ರವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣವನ್ನು ಎನ್.ಬೇಗೂರು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಕಾರ್ಯಾಚರಣೆಯಲ್ಲಿ ವಿಶೇಷ ಹುಲಿ ಸಂರಕ್ಷಿತ ದಳ ಪ್ಲಟೂನ್ 02 ಹ್ಯಾಂಡ್ ಪೋಸ್ಟ್ ವಲಯ ಅರಣ್ಯಾಧಿಕಾರಿ ಶಿವನಗೌಡ ಎಸ್ ಗೌಡರ್, ಮಹೇಶ್, ಸಿಬ್ಬಂಧಿಗಳಾದ ಚಂದ್ರ,ಪ್ರಕಾಶ್, ಮಧುಸೂಧನ್ ಭಾಗಿಯಾಗಿದ್ದರು.