ಶ್ರೀರಂಗಪಟ್ಟಣ: ಉತ್ತರದ ಗಂಗಾ ಆರತಿಯ ಮಾದರಿಯಲ್ಲೇ ದಕ್ಷಿಣದ ಗಂಗೆ ಎಂದೇ ಖ್ಯಾತಿಯಾದ ಕಾವೇರಿಗೆ ಆರತಿ ಕಾರ್ಯಕ್ರಮ ನಡೆಯಿತು.
ಶೂರ ಮತ್ತು ಪದ್ಮಾಸುರಾ ಎಂಬ ರಾಕ್ಷಸರು ತಮ್ಮ ಶಕ್ತಿಯಿಂದ ಮಳೆಯನ್ನು ತಡೆ ಹಿಡಿದು ದಕ್ಷಿಣಾಂತ್ಯದ ಜನರನ್ನು ಸಂಕಟದಿಂದ ನರಳುವಂತೆ ಮಾಡಿದರು.
ಈ ಸ್ಥಿತಿಯನ್ನು ಕಂಡು ಮರುಗಿದ ಇಂದ್ರದೇವನು ಗಣೇಶನನ್ನು ಪ್ರಾರ್ಥಿಸಿ ಈ ಸಮಸ್ಯೆ ಪರಿಹರಿಸುವಂತೆ ಬೇಡಿಕೊಂಡನು.
ಸಮಸ್ಯೆ ಪರಿಹರಿಸಲು ಗಣೇಶ ಯೋಜಿಸುವಷ್ಟರಲ್ಲಿ ಕೈಲಾಸದಲ್ಲಿ ಹರಿಯುತ್ತಿದ್ದ ಕಾವೇರಿಯು ಶಿವಾಜ್ಞೆಯಂತೆ ಅಗಸ್ತ್ಯರ ನಿತ್ಯ ಕರ್ಮಗಳ ಅನುಕೂಲಕ್ಕಾಗಿ ಅಗಸ್ತ್ಯರ ಕಮಂಡಲ ಸೇರಿರುವುದು ಗಣೇಶನಿಗೆ ತಿಳಿಯಿತು.
ಇದೇ ಸಂದರ್ಭದಲ್ಲಿ ಅಗಸ್ತ್ಯರು ಕಮಂಡಲವನ್ನು ಉರುಳಿಸಿದರು. ಕಮಂಡಲ ದೊಳಗಿದ್ದ ಕಾವೇರಿ ಹೊರಬಂದು ಹರಿಯ ತೊಡಗಿ ದಕ್ಷಿಣದ ಜನರ ಬರವನ್ನು ನೀಗಿಸಿ ಸಮೃದ್ಧಿಯನ್ನು ಸೃಷ್ಟಿಸಿದಳು ಎಂದು ಸ್ಕಂದ ಪುರಾಣವು ತಿಳಿಸುತ್ತದೆ.
ನಮ್ಮ ಭಾವನೆ ನೀಗಿಸಲು ಕೈಲಾಸದಿಂದ ಮಹಾತಾಯಿ ಕಾವೇರಿ ಕರ್ನಾಟಕ ಹಾಗೂ ತಮಿಳುನಾಡಿನ ಕೋಟ್ಯಾಂತರ ಜನರ ಜೀವನಾಡಿಯಾಗಿದ್ದಾಳೆ. ಅವಳನ್ನು ಗೌರವಿಸಿ ಸಂರಕ್ಷಿಸಬೇಕಾದದ್ದು ನಮ್ಮ ಹೊಣೆ.
ಪ್ರತಿ ವರ್ಷವೂ ತುಲಾ ಸಂಕ್ರಮಣದಂದು ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಬವ ರೂಪದಲ್ಲಿ ನಾಡಿನ ಜೀವನದಿ ಕಾವೇರಿ ಮಾತೆ ಉದ್ಭವಿಸುತ್ತಾಳೆ
ಅಂದು ನಾಡಿನ ಜನ ಬಹಳ ಶ್ರದ್ದೆ, ಗೌರವದಿಂದ ದಕ್ಷಿಣ ಭಗೀರಥಿಯನ್ನು ಸ್ವಾಗತಿಸಿ ಅವಳಲ್ಲಿ ಮಿಂದು ಪುನೀತರಾಗುತ್ತಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಾಶಿಯಲ್ಲಿ ಯಾವ ರೀತಿ ದಿನನಿತ್ಯ ಗಂಗಾ ಆರತಿ ನಡೆಯುತ್ತದೆಯೋ ಅದೇ ರೀತಿ ನಡೆಯುತ್ತದೆ.
ವರ್ಷಕ್ಕೆ ಒಂದು ಬಾರಿ ಅಂದರೆ ತುಲಾಸಂಕ್ರಮಣದಂದು ಶ್ರೀರಂಗಪಟ್ಟಣದ ಸ್ನಾನಘಟ್ಟದ ನದಿಯ ದಂಡೆಯ ಮೇಲೆ ಕಾವೇರಿ ಆರತಿ ಕಾರ್ಯಕ್ರಮವನ್ನು 2021 ರಿಂದ ಮಂಡ್ಯ ಜಿಲ್ಲಾ ಯುವ ಬ್ರಿಗೇಡ್ ಘಟಕದವರು ನೆರವೇರಿಸಿ ಕೊಂಡು ಬರುತ್ತಿದ್ದಾರೆ.
ಶ್ರೀರಂಗಪಟ್ಟಣ ಮತ್ತು ಸುತ್ತಮುತ್ತಲಿನ ಸಾವಿರಾರು ಮಂದಿ ಆರತಿಯ ದೃಶ್ಯವನ್ನು ಕಣ್ತುಂಬಿಕೊಂಡು ಪುನೀತರಾದರು.
ಶ್ರೀರಂಗಪಟ್ಟಣದ ವೇದಬ್ರಹ್ಮ ಶ್ರೀ ಡಾ.ಭಾನುಪ್ರಕಾಶ್ ಶರ್ಮಾ ಗುರೂಜಿ, ಗೌರಿಗದೆಯ ಸಂಸ್ಥಾಪಕರಾದ ವಿನಯ ಗುರೂಜಿ ಹಾಗೂ ಚಂದ್ರವನ ಆಶ್ರಮದ ಪೀಠಾಧಿಪತಿಗಳಾದ ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿಗಳು ಉಪಸ್ಥಿತರಿದ್ದರು.