ಆಟೋ ಪಲ್ಟಿ ಸ್ಥಳದಲ್ಲೇ ಪ್ರಯಾಣಿಕ ಸಾವು

ಚಾಮರಾಜನಗರ:ನಗರದ ಬಿ.ರಾಚಯ್ಯ ಜೋಡಿ ರಸ್ತೆ ಎಸ್ಪಿ ಕಚೇರಿಯ ಮುಂಭಾಗ ಆಟೋ ಡಿವೈಡರ್ ಗೆ ಡಿಕ್ಕಿ ಹೊಡೆದು ಪರಿಣಾಮ ಸ್ಥಳದಲ್ಲೇ  ಪ್ರಯಾಣಿಕ ಮೃತ ಪಟ್ಟಿದ್ದಾನೆ.

ಚಾಮರಾಜನಗರ ಕಡೆಯಿಂದ ನಾಗವಳ್ಳಿ ಕಡೆಗೆ ಬರುತ್ತಿದ್ದ ಆಟೋ  ಮಾರ್ಗಮಧ್ಯೆ ಇರೊ ಎಸ್ಪಿ ಕಚೇರಿ ಮುಂಭಾಗ ಡಿವೈಡರ್ ಗೆ ಸೋಮವಾರ ರಾತ್ರಿ ಡಿಕ್ಕಿ ಹೊಡೆದಿದೆ.

ಕರಳಮೋಳೆ ಗ್ರಾಮದ ಸ್ವಾಮಿ ಎಂಬಾತನೆ ಸಾವನ್ನಪ್ಪಿದ ದುರ್ದೈವಿ.

ಅಪಘಾತದಿಂದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್  ಉಂಟಾಗಿ ಸಂಚಾರ ಅಸ್ತವ್ಯಸ್ಥವಾಗಿತ್ತು.

 ಚಾಮರಾಜನಗರ ಸಂಚಾರ ಪೊಲೀಸ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.