ರಾಜರತ್ನ ಇಲ್ಲದ ವರ್ಷ

ಡಾ.ಗುರುಪ್ರಸಾದ ರಾವ್‌ ಹವಲ್ದಾರ್

ಕರ್ನಾಟಕದ ಮುತ್ತು, ಅಭಿಮಾನಿಗಳ ಪಾಲಿನ ಅಪ್ಪು, ಸ್ಯಾಂಡಲ್ವುಡ್ ಪವರ್ ಒಂದು ಎಲ್ಲರನ್ನೂ ಬಿಟ್ಟು ಬಾರದ ಊರಿನತ್ತ ಪಯಣ ಬೆಳಸಿ  ಇಂದಿಗೆ ಒಂದು ವರ್ಷ ವಾಯಿತು.

ಹೌದು, ಅಭಿಮಾನಿಗಳ ಪಾಲಿನ ಅಪ್ಪು  ನಮ್ಮೆಲ್ಲರ ಪ್ರೀತಿಯ ಅಪ್ಪು ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೂ ಅವರ ನೆನಪುಗಳು ಎಂದೆಂದಿಗೂ ಎಲ್ಲರ ಮನದಲ್ಲಿ ಹಾಗೆಯೇ ಇರುತ್ತದೆ.

ತಮ್ಮ ಮೆಚ್ಚಿನ ನಟನ ದರ್ಶನ ಪಡೆದು ಹೋಗುತ್ತಿದ್ದಾರೆ. ಅಲ್ಲದೇ ಪ್ರೀತಿಯ ತಮ್ಮನನ್ನು ಶಿವಣ್ಣ ಯಾವುದೇ ಕಾರ್ಯಕ್ರಮದಲ್ಲಾದರೂ ನೆನೆದು ಇಂದಿಗೂ ಭಾವುಕರಾಗುತ್ತಿದ್ದಾರೆ.

ಅದರಲ್ಲೂ ಅವರ ಅಭಿಮಾನಿಗಳು ಒಂದೇ ಒಂದು ಕ್ಷಣ ಅವರನ್ನು ಮರೆತಿಲ್ಲ, ಕನ್ನಡಿಗರ ಎದೆಯಲ್ಲಿ ಅಪ್ಪು  ಎಂದಿಗೂ ಜೀವಂತ. ದೊಡ್ಮನೆ ರಾಜಕುಮಾರ ದೈಹಿಕವಾಗಿ ಇಲ್ಲದಿದ್ದರೂ, ಅವರ ನೆನಪುಗಳ ಜೊತೆ ಫ್ಯಾನ್ಸ್ ಹೇಗೋ ಜೀವನ ಮಾಡ್ತಿದ್ದಾರೆ.

ಅವರು ನಮ್ಮೊಡನಿಲ್ಲ ಅಂತ ಅಭಿಮಾನಿಗಳು ಅಂದುಕೊಂಡೇ ಇಲ್ಲ. ಹೀಗೆ ಪ್ರತಿ ದಿನ ಪ್ರತಿ ಕ್ಷಣ ಅಭಿಮಾನಿಗಳಿಗೆ, ಅದೆಷ್ಟೋ ಯುವಜನರಿಗೆ  ಯುವ ನಟನಟಿಯರಿಗೆ ಯುವರತ್ನನೇ  ಸ್ಫೂರ್ತಿಯಾಗಿದ್ದಾರೆ.

ಪುನೀತ್ ತೆರೆಯ ಮೇಲಿನ ಒಳ್ಳೆಯ ನಟರಷ್ಟೇ ಅಲ್ಲ, ತೆರೆಯ ಹಿಂದಿನ ಹೃದಯವಂತ ಕೂಡ ಎಂಬುದು ಅರಿವಾಗಿ  ಅಪ್ಪು ಅಗಲಿಕೆಯ ನೋವು ಜನರನ್ನು ಇನ್ನೂ ಬಾಧಿಸುತ್ತಲೇ ಇದೆ.

ಪುನೀತ್ ರಾಜ್ಕುಮಾರ್ ಎಂಬ ನಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಇಷ್ಟೊಂದು ಹತ್ತಿರವಾಗಿದ್ದು ಹಾಡು, ಫೈಟು, ಡಾನ್ಸ್ಗಳ ಮೂಲಕ  ಮಕ್ಕಳಿಗೆ ಸೂಪರ್ಮ್ಯಾನ್, ಹೆಂಗಳೆಯರ ಕಣ್ಣಿಗೆ ಆದರ್ಶ ಪುರುಷ ಮತ್ತು ಪ್ರೀತಿಯ ಸಹೋದರ, ಯುವಕರ ಪಾಲಿನ ಐಕಾನ್, ಯುವತಿಯರ ಕನಸಿನ ರಾಜಕುಮಾರ, ಹಿರಿಯರಿಗೆ ಸ್ವಂತ ಮನೆಮಗನಂತಾಗಿದ್ದರು.

 ‘ದೊಡ್ಮನೆ ಮೇಲಿನ ಜನರ ನಿರೀಕ್ಷೆಗಳನ್ನು ಸುಳ್ಳಾಗಿಸದೆ ಅತ್ಯುತ್ತಮ ಕಲಾವಿದರಾಗಿದ್ದರುರಾಜಕುಮಾರ, ‘ಮೈತ್ರಿಯಂಥ ಮೌಲ್ಯಯುತ ಸಿನಿಮಾಗಳು ಕೌಟುಂಬಿಕ ಮೌಲ್ಯ ಸಾಮಾಜಿಕ ಬದಲಾವಣೆ ತಂದವು

ನಾಟಕೀಯತೆಯೇ ಇಲ್ಲದ ಮಾನವ ಸಹಜ ನಡವಳಿಕೆಯ ಮೂಲಕ ಜನರ ಜತೆಗೆ ಹೆಚ್ಚೆಚ್ಚು ಬೆರೆಯುತ್ತಾ  ಎಲ್ಲರನ್ನೂ ಸಮಾನವಾಗಿ ಗೌರವಿಸಿ ಅವರ ನೋವು, ನಲಿವುಗಳಲ್ಲಿ ಭಾಗಿಯಾದರು.

ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಶತದಿನೋತ್ಸವ ಆಚರಿಸಿದೆ. ರಾಜರತ್ನನ ಅಭಿನಯದ ಕೊನೆಯ ಚಿತ್ರಮಾರ್ಚ್ 17ರಂದು ಅವರ ಜನ್ಮದಿನದಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ದಿನದಿಂದಲೂ ಚಿತ್ರಮಂದಿರ ಫುಲ್ ಆಗಿತ್ತು. ಅಲ್ಲದೇ ರಿಲೀಸ್ ಆದ ಕೆಲವೇ ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿತ್ತು .

ಇತ್ತೀಚೆಗೆ ಅವರ ಅಭಿನಯದ ಲಕ್ಕಿಮ್ಯಾನ್ ಚಿತ್ರ ಬಿಡುಗಡೆಯಾಗಿ  ಯಶಸ್ವಿ ಪ್ರದರ್ಶನ ಕಾಣುತ್ತದೆ.

ಅಲ್ಲದೇ  ಅವರ ಕನ್ನಡ ನಾಡಿನ ಪ್ರಾಕೃತಿಕ ಸೌಂದರ್ಯ, ಪ್ರಕೃತಿಯ ಬಗೆಗಿನ ಆಸಕ್ತಿ, ಪ್ರಾಣಿ ಸಂಪತ್ತಿನ ಬಗ್ಗೆ ಅವರೇ  ಮುತುವರ್ಜಿ ವಹಿಸಿ ತಯಾರಿಸಿದ ಗಂಧದಗುಡಿ ಚಿತ್ರ ಬಿಡುಗಡೆಯಾಗಿದೆ.

ನಾಡುನುಡಿಭಾಷೆಇತಿಹಾಸಸಾಹಿತ್ಯಚಿತ್ರರಂಗಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಮಹನೀಯರಿಗೆ ಮಾತ್ರ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ  ಪುನೀತ್ ರಾಜ್ಕುಮಾರ್ ಅವರಿಗೆ  ನೀಡುವ ಮೂಲಕ ನಾಡಿನ ಜನರ ಅಭಿಲಾಷೆಯನ್ನು ಈಡೇರಿಸಿದೆ.

ಕನ್ನಡ ರಾಜ್ಯೋತ್ಸವ ದಿನದಂದು ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಈವರೆಗೂ ರಾಷ್ಟ್ರಕವಿ ಕುವೆಂಪು, ವರನಟ ಡಾ.ರಾಜ್ಕುಮಾರ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಸುಮಾರು ಎರಡು ದಶಕಗಳ ನಂತರ ಪುನೀತ್ ರಾಜ್ಕುಮಾರ್ ಅವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಜೊತೆಗೆ  ಅವರ ಜನ್ಮದಿನವನ್ನು (Birthday) ‘ಸ್ಫೂರ್ತಿ ದಿನವನ್ನಾಗಿ (Inspiration Day) ಆಚರಿಸಲು ಆದೇಶ ನೀಡಿದೆ.

ಡಾ. ರಾಜ್ಕುಮಾರ್ ರೀತಿಯೇ ಪುನೀತ್​​ ರಾಜ್ಕುಮಾರ್ ಕೂಡ ಕಣ್ಣುಗಳನ್ನು ದಾನ ಮಾಡಿದರು. ಅಪ್ಪು ಕಣ್ಣಿನಿಂದ ಒಟ್ಟು 10 ಜನರಿಗೆ ದೃಷ್ಟಿ ನೀಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕಾರ್ಯ ಮಾಡಲಾಗಿದೆ. ನೇತ್ರದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ.

ನೇತ್ರದಾನ ನೋಂದಣಿ ಶಿಬಿರಗಳ ಸಂಖ್ಯೆ ಹೆಚ್ಚಿದೆ. ಅನೇಕ ಸಂಘಸಂಸ್ಥೆಗಳು, ಶಾಲಾಕಾಲೇಜುಗಳು, ಅಭಿಮಾನಿ ಸಂಘಗಳು ನೇತ್ರಾದಾನ ನೋಂದಣಿ ಶಿಬಿರಗಳನ್ನು ಆಯೋಜಿಸುತ್ತಿವೆ. ಲಕ್ಷಾಂತರ ಜನರು ನೇತ್ರದಾನದ ಪ್ರತಿಜ್ಞೆ ಮಾಡಿದ್ದಾರೆ.

ಒಬ್ಬ ಸಿನಿಮಾ ನಟ ಅಥವಾ ಕಲಾವಿದ ಮರಣಾನಂತರ ಜನರ ಹೃದಯಗಳಲ್ಲಿ ನೆನಪಾಗಿ ಚಿರಸ್ಥಾಯಿಯಾಗಬಹುದೇ ಹೊರತು ಹೊಸ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳುವ ಸಂಭವಗಳು ತೀರಾ ಕಡಿಮೆ. ಆದರೆ ಪುನೀತ್ ರಾಜ್ಕುಮಾರ್ ವಿಷಯದಲ್ಲಿ ಇದು ಅಪವಾದವಾಗಿ ಪರಿಣಮಿಸಿದೆ. ಅವರ ಆಕಸ್ಮಿಕ ನಿಧನದ ನಂತರ  ಕನ್ನಡ ನಾಡಿನ ಪಾಲಿಗೆ  ನುಂಗಲಾರದ ತುತ್ತು ಮತ್ತು  ನಮ್ಮೊಂದಿಗಿಲ್ಲ ಎಂಬುದು ಅರಗಿಸಿಕೊಳ್ಳಲಾಗದ ಸತ್ಯ.

ಆದರೆ, ತಮ್ಮ ಸರಳ ಸಜ್ಜನಿಕೆ, ಹೃದಯ ವೈಶಾಲ್ಯ, ಸಮಾಜ ಸೇವೆ ಹಾಗೂ ಸಿನಿಮಾಗಳ ಮೂಲಕ ಅವರು ನಮ್ಮೊಂದಿಗೆ ಸದಾ ಇರುತ್ತಾರೆ.  ಅವರ ಆದರ್ಶಗಳನ್ನು ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬೇಕು. ಅದೇ ನಾವು ಅಪರೂಪದ ನಟನಿಗೆ ಸಲ್ಲಿಸುವ ಗೌರವದ ಶ್ರದ್ಧಾಂಜಲಿ