ಬಂಡೆಮಠದ ಸ್ವಾಮೀಜಿ ಸಾವಿನ ಸಂಬಂಧ ಕಣ್ಣೂರು ಶ್ರೀ, ಯುವತಿ ಅರೆಸ್ಟ್

ಬೆಂಗಳೂರು: ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾವಿನ ಹಿನ್ನೆಲೆಯಲ್ಲಿ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.
ಬಂಡೆ ಮಠದ ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸಲು ಕಣ್ಣೂರು ಶ್ರೀಗಳು ಷಡ್ಯಂತ್ರ ನಡೆಸಿದ್ದಾರೆಂಬ ಆರೋಪವಿದೆ.
ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ  ಯುವತಿಯೊಂದಿಗೆ‌ ಸೇರಿ ಹನಿಟ್ರ್ಯಾಪ್ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಹನಿಟ್ರ್ಯಾಪ್ ಮಾಡಿದ್ದಾಳೆಂಬ ಯುವತಿಯನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ.
ಬಸವಲಿಂಗ‌ ಸ್ವಾಮೀಜಿಯವರು ಸಾವಿಗೂ ಮೊದಲು ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ಕಣ್ಣೂರು ಮಠದ‌ ಮೃತ್ಯುಂಜಯ ಶ್ರೀಗಳ ಹೆಸರಿರುವುದರಿಂದ ವಿಚಾರಣೆಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಸವಲಿಂಗ ಸ್ವಾಮೀಜಿ ವಿರುದ್ದ ಹನಿಟ್ರ್ಯಾಪ್ ನಡೆಸಿ ಮಾನಸಿಕ ಕಿರುಕುಳ ನೀಡಿ ಪೀಠತ್ಯಾಗ ಮಾಡುವಂತೆ ಷಡ್ಯಂತ್ರ ರೂಪಿಸಲಾಗಿದೆ ಎಂದು ಅವರ ಶಿಷ್ಯರು ಆರೋಪಿಸಿದ್ದಾರೆ.
ಒಟ್ಟಾರೆ ಬಸವಲಿಂಗ ಸ್ವಾಮೀಜಿ ಅವರ ಸಾವು ಇನ್ನೂ ನಿಗೂಢವಾಗಿದ್ದು,ದಿನಕ್ಕೊಂದು  ಟ್ವಿಸ್ಟ್ ಪಡೆಯುತ್ತಿದೆ.
ಮೃತ್ಯುಂಜಯ ಸ್ವಾಮೀಜಿ ಹಾಗೂ ಯುವತಿಯ ತೀವ್ರ ವಿಚಾರಣೆ ಮುಂದುವರಿದಿದೆ.