ಅಕ್ರಮ ವಿದ್ಯುತ್ ಸಂಪರ್ಕ ಪಡೆದ 15 ಮಂದಿ ಮೇಲೆ ಪ್ರಕರಣ ದಾಖಲು

ಮೈಸೂರು: ಚೆಸ್ಕಾಂ ಜಾಗೃತ ದಳದವರು ದಿಢೀರ್  ಕಾರ್ಯಾಚರಣೆ ನಡೆಸಿ ಅಕ್ರಮ ವಿದ್ಯುತ್ ಸಂಪರ್ಕ ಪಡೆದ 15 ಮಂದಿ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಸೆಸ್ಕ್ ಜಾಗೃತ ದಳದ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಡಿವೈಎಸ್ಪಿ ಅನ್ಸರ್ ಆಲಿ ಮತ್ತು ..ತಬಸ್ಸಮ್ ರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.

ಹುಣಸೂರಿನಲ್ಲಿ 3 ಪ್ರಕರಣಗಳು,ನಂಜನಗೂಡಿನಲ್ಲಿ 3, ಕೆ.ಆರ್.ನಗರದಲ್ಲಿ 2 ಹಾಗೂ ಮೈಸೂರು ತಾಲೂಕಿನಲ್ಲಿ 7 ಪ್ರಕರಣಗಳನ್ನು  ಪತ್ತೆ ಹಚ್ಚಲಾಗಿದೆ.

ವಿದ್ಯುತ್ ಕಂಬದಿಂದ ನೇರವಾಗಿ ಮನೆಗೆ ಸಂಪರ್ಕ ಪಡೆದಿರುವುದು,ವಿದ್ಯುತ್ ಶುಲ್ಕ ಪಾವತಿಸದೆ ಸಂಪರ್ಕ ಕಡಿತವಾಗಿದ್ದರೂ ಅಕ್ರಮವಾಗಿ ಸಂಪರ್ಕ  ಪಡೆದಿರುವುದು, ಸಾರ್ವಜನಿಕ ಕುಡಿಯುವ ನೀರಿನ ಘಟಕದಿಂದ ಅಕ್ರಮವಾಗಿ ಸಂಪರ್ಕ ಪಡೆದಿರುವುದು ಹೀಗೆ ಹಲವು ರೀತಿಯಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು  ವಂಚಿಸಲಾಗಿದೆ.

ಅಕ್ರಮಕ್ಕೆ ಸಾಥ್ ನೀಡಿದ ಆಲನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಹಾಗೂ ಬಿಳಿಕೆರೆ ಹೋಬಳಿಯ ಬೋಳನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಮೇಲೂ ಪ್ರಕರಣ ದಾಖಲಿಸಲಾಗಿದೆ.

ಸೆಸ್ಕ್ ಜಾಗೃತ ದಳದ ನಿರೀಕ್ಷಕರಾದ ವಿನಯ್, ...ಮನೀಷ್ ಪಾಠಕ್ ರವರ ಉಸ್ತುವಾರಿಯಲ್ಲಿ ..ಮಣಿಕಂಠಸ್ವಾಮಿ,ವಿಶ್ವನಾಥ್,ಕೌಸರ್,ತೋಂಟದಾರ್ಯ,ಜಗದೀಶ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಚೆಸ್ಕಾಂ ಜಾಗೃತ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.