ಚಿಂದಿ ಆಯುವವನ ಹತ್ಯೆ: 24 ಗಂಟೆಯಲ್ಲೇ ಆರೋಪಿ ಅಂದರ್

ಮೈಸೂರು: ಅಲ್ಲಿ ಇಲ್ಲಿ ಆಯ್ದು ಶೇಕರಿಸಿಟ್ಟಿದ್ದ ಚಿಂದಿ ವಸ್ತುಗಳನ್ನು ಕದ್ದು ಮಾರಾಟ ಮಾಡಿದ ಕಾರಣಕ್ಕೆ ಸ್ನೇಹಿತನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲು ನಡೆದಿದೆ.
ಆದರೆ ಕೃತ್ಯ ನಡೆದ 24 ಗಂಟೆಯಲ್ಲೇ ಹಂತಕನನ್ನ ಬಂಧಿಸುವಲ್ಲಿ ಲಷ್ಕರ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಟಿ.ನರಸೀಪುರ ತಾಲೂಕು ಯಡತೊರೆ ಗ್ರಾಮದ ಚೆನ್ನಜ್ಜ(42) ಕೊಲೆಯಾದ ದುರ್ದೈವಿ.
ಪಾಂಡವಪುರದ ನವಾಸಿ ಸಮರ್ಥ್(23) ಕೊಲೆ ಮಾಡಿ ಸೆರೆಸಿಕ್ಕ ಆರೋಪಿ. 
ನವೆಂಬರ್ 11 ರಂದು ಮೈಸೂರಿನ ಉಮಾ ಚಿತ್ರಮಂದಿರದ ಬಳಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಅಪರಿಚಿತ ರಕ್ತಸಿಕ್ತ ಮೃತದೇಹ ಕಂಡು ಪತ್ತೆಯಾಗಿತ್ತು.
ಕಮೀಷನರ್ ಡಾ.ಚಂದ್ರಗುಪ್ತ, ಡಿಸಿಪಿ ಪ್ರದೀಪ್ ಗಂಟಿ ಹಾಗೂ ಗೀತಾ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಎಸಿಪಿ ಶಶಿಧರ್ ಉಸ್ತುವಾರಿಯಲ್ಲಿ ಲಷ್ಕರ್ ಠಾಣೆಯ ಇನ್ಸ್ ಪೆಕ್ಟರ್ ಸಂತೋಷ್  ನೇತೃತ್ವದಲ್ಲಿ ತಂಡ ರಚಿಸಲಾಯಿತು.
ಲಷ್ಕರ್ ಠಾಣೆಯಲ್ಲಿ ನಡೆಯುತ್ತಿರುವ ರಾತ್ರಿ ಗಸ್ತಿನ ವಿಶೇಷ ಕಾರ್ಯಾಚರಣೆ ಹಂತಕನ ಪತ್ತೆಗೆ ನೆರವಾಗಿತ್ತು.
ಶಂಕಿತ ಯುವಕನೊಬ್ಬ ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿ ಚಿಕ್ಕಣ್ಣಸ್ವಾಮಿ ಕಣ್ಣಿಗೆ ಬಿದ್ದಿದ್ದ.
ಯುವಕನ ಫೋಟೋ ಕ್ಲಿಕ್ಕಿಸಿದ್ದ ಸಿಬ್ಬಂದಿ ಠಾಣೆಯಲ್ಲಿ ದಾಖಲಿಸಿದ್ದರು.
ರಾತ್ರಿ ವೇಳೆ ಸಿಕ್ಕ ಯುವಕನ ಫೋಟೋ ಪರಿಶೀಲನೆ ನಡೆಸಿದಾಗ ಆತನ ಕಾಲಿನಲ್ಲಿ ರಕ್ತದ ಕಲೆಗಳಿದ್ದುದು ಗೊತ್ತಾಗಿದೆ.
ಕೂಡಲೇ ಯುವಕನ ಪತ್ತೆಗೆ ಲಷ್ಕರ್ ಠಾಣೆ ಪೊಲೀಸರು ಮುಂದಾದಾಗ ಟೌನ್ ಹಾಲ್ ನಲ್ಲಿ ಫೋಟೋದಲ್ಲಿದ್ದ ಚೆಹರೆಯ ವ್ಯಕ್ತಿ ಸಿಕ್ಕಿದ.
ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಕೊಲೆಯಾದ ಚೆನ್ನಜ್ಜ ಹಾಗೂ ಆರೋಪಿ ಸಮರ್ಥ್ ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದರು. 
ಗ್ಯಾಂಗರಿನ್ ನಿಂದ ಕಾಲು ಕಳೆದುಕೊಂಡಿದ್ದ ಚೆನ್ನಜ್ಜನಿಗೆ ಸಮರ್ಥ್ ಸಹಾಯಕನಾಗಿದ್ದ.
ಇತ್ತೀಚೆಗೆ ಇವರಿಬ್ಬರ ನಡುವೆ ವೈಮನಸ್ಸು ಕಾಣಿಸಿಕೊಂಡಿತ್ತು.
ಅನಗತ್ಯವಾಗಿ ಸಮರ್ಥ್ ಗೆ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಿದ್ದ.ಅಲ್ಲದೆ ಸಮರ್ಥ್ ಆಯ್ದ ತರುತ್ತಿದ್ದ ಚಿಂದಿಯನ್ನ ಚೆನ್ನಜ್ಜ ಕದ್ದು ಮಾರುತ್ತಿದ್ದ.ಇದರಿಂದ ಇಬ್ಬರ ನಡುವೆ ಗಲಾಟೆ ಆಗಿತ್ತು.
ನವೆಂಬರ್ 10 ರ ರಾತ್ರಿ ಇದೇ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿದೆ.ರಸ್ತೆಯಲ್ಲಿ ಬಿದ್ದಿದ್ದ ಬೀರ್ ಬಾಟೆಲ್  ತಂದು ಸಮರ್ಥ್ ಚೆನ್ನಜ್ಜನ ತಲೆಗೆ ಹೊಡೆದು.ನಂತರ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದ.
ಅಪರಿಚಿತ ವ್ಯಕ್ತಿಯ ಬಳಿ ಯಾವುದೇ ಮೊಬೈಲ್ ಇರಲಿಲ್ಲ.ಆತನ ಮಾಹಿತಿಯೂ ಇರಲಿಲ್ಲ.ಪ್ರಕರಣವನ್ನ ಸವಾಲಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಹಂತಕನ ಪತ್ತೆಗೆ ಕಾರ್ಯತಂತ್ರ ರೂಪಿಸಿದ್ದರು.
ಕೃತ್ಯ ನಡೆದು ಕೇವಲ 24 ಗಂಟೆಯಲ್ಲಿ ಮೃತನ ಮಾಹಿತಿಯನ್ನ ಕಲೆ ಹಾಕಿದ್ದಲ್ಲದೆ ರಾತ್ರಿ ವಿಶೇಷ ಕಾರ್ಯಾಚರಣೆ ನೆರವಿನಿಂದ ಆರೋಪಿಯನ್ನ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ಸ್ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ಲಷ್ಕರ್ ಠಾಣೆಯ ಪಿಎಸ್ಸೈಗಳಾದ ಗೌತಮ್, ಧನಲಕ್ಷ್ಮಿ ಎಎಸ್ಸೈ ಸಿದ್ದರಾಜು,ಸಿಬ್ಬಂದಿಗಳಾದ ಚೇತನ್,ಚೆನ್ನಪ್ಪ,ನದಾಫ್,ಮಹದೇವಪ್ರಸಾದ್,ಲಿಂಗರಾಜು,ಮಹೇಶ್,ಶಿವರಾಜ್,ರಮೇಶ್ ರವರನ್ನೊಳಗೊಂಡ ತಂಡ ಹಂತಕನ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಯಾವುದೇ ತಂತ್ರಜ್ಞಾನ ಬಳಸದೆ ಆರೋಪಿಯನ್ನ ಪೊಲೀಸರು ಬಂಧಿಸಿರುವುದು ವಿಶೇಷ.
ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆರೋಪಿಉನ್ನು ಶೀಘ್ರ ಬಂಧಿಸಿರುವುದಕ್ಕೆ ಲಷ್ಕರ್ ಠಾಣೆ ಸಿಬ್ಬಂದಿಗಳನ್ನ ಶ್ಲಾಘಿಸಿದ್ದಾರೆ.