ಪ್ರಿಯತಮೆಯ ಇರಿದ ಭಗ್ನಪ್ರೇಮಿ

ಮೈಸೂರು: ಪ್ರಿಯತಮೆ ತನ್ನಿಂದ ಅಂತರ ಕಾಯ್ದುಕೊಂಡದ್ದಕ್ಕೆ ಹತಾಶೆ ಗೊಳಗಾದ ಪ್ರೇಮಿ ಆಕೆಯನ್ನು ಚಾಕುವಿನಿಂದ ಇರಿದ ಘಟನೆ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಶುಶ್ರೂಷಕಿ ಜ್ಞಾನಶ್ರೀ ಎಂಬಾಕೆ ಇರಿತಕ್ಕೆ ಒಳಗಾದ ಪ್ರಿಯತಮೆ.

ಈಕೆಯ ಪ್ರಿಯತಮ ಯಳಂದೂರಿನ ನಿವಾಸಿ ನಂಜುಂಡಸ್ವಾಮಿ ಈ ಕೃತ್ಯವೆಸಗಿದವ.

ಆಸ್ಪತ್ರೆಗೆ ಏಕಾಏಕಿ ನುಗ್ಗಿದ ನಂಜುಂಡಸ್ವಮಿ ಹಾಡು ಹಗಲೇ ಇಂತಹ ಕೃತ್ಯವೆಸಗಿದ್ದಾನೆ.

ಜ್ಞಾನಶ್ರೀ ನೆರವಿಗೆ ಬಂದ ಮತ್ತೊಬ್ಬ ನರ್ಸ್ ಮೇಲೂ ದಾಳಿ ಮಾಡಿದ್ದಾನೆ.ಕೂಡಲೇ ಅಲ್ಲಿದ್ದವರು ಮಧ್ಯ ಪ್ರವೇಶಿಸಿ ಜ್ಞಾನಶ್ರೀಯನ್ನ ರಕ್ಷಿಸಿದ್ದಾರೆ.

ಕೆಲವು ವರ್ಷಗಳಿಂದ ಇವರಿಬ್ಬರೂ  ಪ್ರೀತಿಸುತ್ತಿದ್ದರು.

ಇತ್ತೀಚೆಗೆ ಜ್ಞಾನಶ್ರೀ ಪ್ರಿಯತಮನಿಂದ ಅಂತರ ಕಾಯ್ದುಕೊಳ್ಳತೊಡಗಿದಳು.ಇದರಿಂದ ಬೇಸತ್ತ ನಂಜುಂಡಸ್ವಾಮಿ ಕೊಲೆಗೆ ಯತ್ನಿಸಿದ್ದಾನೆ.

ಜ್ಞಾನಶ್ರೀ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಹೆಬ್ಬಾಳ ಠಾಣೆ ಪೊಲೀಸರು  ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.