ಯಾದಗಿರಿ: ಟಿಪ್ಪು ಸುಲ್ತಾನ್ ವಿಚಾರದಲ್ಲಿ ಬಿಜೆಪಿಗೆ ಇರುವುದೊಂದೆ ನಿಲುವು ಎಮದು ಕಂದಾಯ ಸಚಿವಆರ್.ಅಶೋಕ್ ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಗ್ರಾಮದಲ್ಲಿ ಬೆಳೆ ಹಾನಿ ಬಗ್ಗೆ ವೀಕ್ಷಣೆ ಮಾಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅಶೋಕ್ ಅವರು ಮಾತನಾಡಿದರು.
ಅವರು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಅವರು ಟಿಪ್ಪು ಅವರನ್ನು ಹೊಗಳಿರುವ ಬಗ್ಗೆ ಪ್ರತಿಕ್ರಿಸಿಸಿ, ವಿಶ್ವನಾಥ ಅವರು ಏನು ಹೇಳಿದ್ದಾರೆ ಗೊತ್ತಿಲ್ಲ. ನಮ್ಮದು ಯಾವಾಗಲೂ ಟಿಪ್ಪುವಿನ ವಿರೋಧವಿದೆ ಎಂದರು.
ಟಿಪ್ಪುವಿನ ಕಾಲದಲ್ಲಿ ಮತಾಂತರ ಮಾಡಿದ್ದು, ದೌರ್ಜನ್ಯ ಮಾಡಿದ್ದು ಹಾಗೂ ಕಗ್ಗೊಲೆ ಮಾಡಿರುವುದು ನಮ್ಮ ಕಣ್ಣು ಮುಂದೆ ಇದ್ದು ಟಿಪ್ಪುವಿನ ವಿಚಾರದಲ್ಲಿ ಬಿಜೆಪಿಯಲ್ಲಿ ಮೊದಲಿನ ನಿಲುವಿದೆ ಆದರೆ ಯಾವುದೇ ನಿಲುವು ಬದಲಾವಣೆಯಿಲ್ಲ ಎಂದು ಅಶೋಕ್ ಹೇಳಿದರು.
ಬಿ.ಎಸ್ ವೈ ಪುತ್ರ ಬಿ.ವೈ.ವಿಜಯೇಂದ್ರ ಅವರು 5 ಸಾವಿರ ಕೋಟಿ ರೂ ಗಳಿಕೆ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾವುದೇ ಹಣ ಸಂಪಾದನೆ ಮಾಡುವ ಕೆಲಸ ವಿಜಯೇಂದ್ರ ಮಾಡಿಲ್ಲ. ಕಾಂಗ್ರೆಸ್ ನಾಯಕರು ಸುಮ್ಮನೆ ಆರೋಪ ಮಾಡುತ್ತಾರೆ ಸಾಕ್ಷಿ ಇಲ್ಲದೇ ಮಾತನಾಡುವದು ಸರಿಯಲ್ಲ ಎಂದರು.