ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದ ಜೆಡಿಎಸ್; ಅಣ್ಣನ ಜೋತಿಷ್ಯಕ್ಕೆ ಕಟ್ಟುಬಿದ್ದ ಎಚ್ ಡಿ ಕೆ

ಮೈಸೂರು: ಚುನಾವಣೆಗೆ ಸ್ಪರ್ಧಿಸುವ 100 ಅಭ್ಯರ್ಥಿಗಳ ಪಟ್ಟಿ ಸಿದ್ದವಿದ್ದರೂ ಸಮಯ ಪ್ರಸಕ್ತವಾಗಿಲ್ಲ ಎಂಬ ಅಣ್ಣನ ಮಾತಿಗೆ ಕಟ್ಟುಬಿದ್ದು ಮಾಜಿ ಸಿಎಂ ‌ಕುಮಾರಸ್ವಾಮಿ ಶುಕ್ರವಾರ ‌ಪಟ್ಟಿ ಬಿಡುಗಡೆ ಮಾಡಲೇ ಇಲ್ಲ.

ಶುಕ್ರವಾರ ಪಟ್ಟಿ ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು.ಆದರೆ ಅಣ್ಣನ ಜ್ಯೋತಿಷ್ಯ ನಂಬಿ ಅದನ್ನು ಕೈ ಬಿಟ್ಟಿದ್ದಾರೆ.

ಹಾಗಾಗಿ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆಭೇಟಿ ನೀಡಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರೇ ಹೊರತು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿಲ್ಲ.

ಈ ವೇಳೆ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಎಚ್ ಡಿ ಕೆ,ರೇವಣ್ಣ ನಮ್ಮ ಪಕ್ಷದ ಜ್ಯೋತಿಷಿಗಳಾಗಿದ್ದಾರೆ,

ಈಗ ಸಮಯ ಪ್ರಸಕ್ತವಾಗಿಲ್ಲ ಎಂದು ತಕರಾರು ತೆಗೆದಿದ್ದಾರೆ ಹಾಗಾಗಿ ಬಿಡುಗಡೆ ಯಾಗಲಿಲ್ಲ ಎಂದು ಹೇಳಿದರು.

100 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ಬಿಡುಗಡೆ ಮಾಡುತ್ತೇವೆ ಎಂದರು.

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಎಚ್‌.ಡಿ‌ ದೇವೇಗೌಡರ ನೇತೃತ್ವದಲ್ಲಿ ಪಟ್ಟಿ  ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಬಸ್ ನಿಲ್ದಾಣ ವಿವಾದದ ಬಗ್ಗೆ ಮಾಧ್ಯಮದ ವರು ಕೇಳಿದ ಪ್ರಶ್ನೆಗೆ ಶಾಸಕರೇ ಕಣ್ಣೀರಿಟ್ಟರೆ ಅವರಿಗೆ ಮತ ಕೊಟ್ಟ ಜನರ ಗತಿ ಏನು ಕುಮಾರಸ್ವಾಮಿ ಪ್ರಶ್ನಿಸಿದರು.

ಬಿಜೆಪಿ ಶಾಸಕರು ಕಣ್ಣೀರು ಹಾಕಿರುವುದನ್ನೂ  ನೋಡಿದ್ದೇನೆ,ಸಂಸದರು ಕಣ್ಣೀರು ಹಾಕಿಸಿರುವುದನ್ನು ಗಮನಿಸಿದ್ದೇನೆ.‌

ಇವರಿಗೆ ಮತ ನೀಡಿದ ಜನರ ಕತೆ ಏನು ಎಂದು ಕಾರವಾಗಿ ಪ್ರಶ್ನಿಸಿದರು.

ಮಸೀದಿಯನ್ನಾದರೂ ಮಾಡಿ, ಗೋಪುರವನ್ನಾದರೂ ಮಾಡಿಕೊಳ್ಳಿ ಮೊದಲು ಜನರಿಗೆ ನೆರಳು ಕೊಡಿ

ಕೆಡಹುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು ಕುಮಾರಸ್ವಾಮಿ.