ಚಾಮರಾಜನಗರ: ದಲಿತ ಮಹಿಳೆಯೊಬ್ಬರು ತೊಂಬೆಯಲ್ಲಿ ನೀರು ಕುಡಿದರು ಎಂಬ ಕಾರಣಕ್ಕೆ ಆ ತೊಂಬೆಯ ನೀರನ್ನು ಹೊರಗೆ ಹಾಕಿದ ವಿಡಿಯೊ ವೈರಲ್ ಅಗದ್ದು ಅದಿಕಾರಿಗಳು ಪೇಚಿಗೀಡಾಗಿದ್ದಾರೆ.
ಶುಕ್ರವಾರ ಆ ಗ್ರಾಮದ ದಲಿತ ಯುವಕನ ಮದುವೆಗೆ ಹೆಚ್.ಡಿ.ಕೋಟೆ ಜಿಲ್ಲೆಯ ಸರಗೂರು ತಾಲೋಕಿಗೆ ಸೇರಿದ ಗ್ರಾಮವೊಂದರಿಂದ ಬಂದಿದ್ದ ಸಂಬಂಧಿಕರಲ್ಲಿ ಮಹಿಳೆಯೊಬ್ಬರು ವಾಪಸು ಹೋಗುವಾಗ ನೀರಡಿಕೆಯಾಗಿದೆ.
ಆ ಗ್ರಾಮದ ಮಾರಿಗುಡಿ ಮುಂಭಾಗ ಇರುವ ತೊಂಬೆಯಲ್ಲಿ ನೀರು ಕಂಡ ಮಹಿಳೆ ಕುಡಿದಿದ್ದಾರೆ.
ಇದನ್ನು ನೋಡಿದ ಅನ್ಯ ಕೋಮಿನ ವ್ಯಕ್ತಿ ಅವರನ್ನು ಬೈದು, ನಂತರ ತೊಂಬೆಯಲ್ಲಿದ್ದ ನೀರನ್ನು ಖಾಲಿ ಮಾಡಿ, ಹಸುವಿನ ಗಂಜಲದಿಂದ ತೊಳೆದು, ಶುದ್ಧ ಮಾಡಿದ್ದಾರೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೊ ವೈರಲ್ ಆದ್ದರಿಂದ ಕೆಲ ಮಾದ್ಯಮದವರು ಪೂರಕ ಸಾಕ್ಷ್ಯ ನೋಡದೆ ಸುದ್ದಿ ಪ್ರಕಟ ಮಾಡಿದ್ದರಿಂದ ಅದಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.
ಪ್ರಕರಣದ ವಿಡಿಯೊ ನೋಡೊದೆ ಆದರೆ ಅಲ್ಲಿ ನೀರು ಹರಿಯುವ ಚಿತ್ರಣ ಇದೆ.
ಮಾದ್ಯಮದಲ್ಲಿ ಪ್ರಕಟವಾದಂತೆ ವೈರಲ್ ವಿಡಿಯೊದಲ್ಲಿ ದಲಿತ ಮಹಿಳೆ ಹೇಳಿಕೆ ಇಲ್ಲ.
ಗೋಮೂತ್ರ ಹಾಕಿ ಶುಚಿಗೊಳಿಸುವ ಚಿತ್ರಣವೂ ಇಲ್ಲ. ಆದರೆ ಇಲಾಖೆಯ ವರದಿ ಮೇಲೆ ಕಾರ್ಯೊನ್ಮುಖವಾಗಿ ಕೆಲಸ ಮಾಡುವೆವು. ತಪ್ಪು ಕಂಡುಬಂದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಈ ಬಗ್ಗೆ ಯಾರೂ ಲಿಖಿತ ದೂರು ನೀಡಿಲ್ಲ ಎಂದಿದ್ದಾರೆ.
ಪೊಲೀಸ್ ಇಲಾಖೆ ಐಟಿ ವಿಂಗ್ ವೈಫಲ್ಯ: ಸೂಕ್ಷ್ಮ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದಾಗ ಗಮನಹರಿಸಿ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಬೇಕಾದ ಪೊಲೀಸ್ ಇಲಾಖೆಯ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ವಿಭಾಗವೂ ವೈಫಲ್ಯವಾಗಿದೆ.
ಈಗಾಗಲೆ ತಹಶೀಲ್ದಾರ್ ಅವರು ಸತ್ಯಾಸತ್ಯತೆ ಬಗ್ಗೆ ಕ್ರಮ ವಹಿಸಲು ಮುಂದಾಗಿದ್ದು ಒಂದು ವೇಳೆ ವಿಡಿಯೊದಲ್ಲಿನ ಅಂಶ ಸುಳ್ಳಾದರೆ ಸುಳ್ಳು ವಿಡಿಯೊ ಅಪ್ಲೊಡ್ ಮಾಡಿದವರ ಮೇಲೂ ಕ್ರಮ ವಹಿಸಲು ಶಿಪಾರಸ್ಸು ಮಾಡಲಾಗುವುದು ಅಥವಾ ನಾವೇ ಪ್ರಕರಣ ದಾಖಲು ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಇದು ಇನ್ನೇನಾಗುವುದೋ ಕಾದು ನೋಡಬೇಕಿದೆ.