ಕುಖ್ಯಾತ ಕಳ್ಳನ ಬಂಧನ:7 ಲಕ್ಷ ಬೆಲೆಯ ಚಿನ್ನಾಭರಣ ವಶ

ಮೈಸೂರು: ಕುಖ್ಯಾತ ಕಳ್ಳನನ್ನು ಬಂಧಿಸಿರುವ ನಜರ್ಬಾದ್ ಪೊಲೀಸರು 7 ಲಕ್ಷ ಬೆಲೆಯ

ಸುಮಾರು 163 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ನಾಡಹಬ್ಬ ಮೈಸೂರು ದಸರಾ ಸಮಯದಲ್ಲಿ ಚಾಮರಾಜನಗರದಿಂದ ಮೈಸೂರಿಗೆ ಪಲಪುಷ್ಪ ಪ್ರದರ್ಶನ

ನೋಡಲು ಬಂದಿದ್ದ ಕುಟುಂಬದವರು ತಮ್ಮ ಕಾರನ್ನು ಆದಾಯ ತೆರಿಗೆ ಕಛೇರಿ ಮುಂಭಾಗದ ರಸ್ತೆಯಲ್ಲಿ ಪಾರ್ಕ್

ಮಾಡಿ ಹೋಗಿದ್ದರು.

ಆ ಸಮಯದಲ್ಲಿ ಕಾರಿನ ಒಳಗಡೆ ಇದ್ದ ವ್ಯಾನಿಟಿ ಬ್ಯಾಗ್ನಲ್ಲಿದ್ದ ಚಿನ್ನದ ಆಭರಣಗಳು ಕಳ್ಳತನವಾಗಿತ್ತು.

ಆ ಬಗ್ಗೆ ನಜರ್ಬಾದ್ ಪೊಲೀಸ್ ಠಾಣೆ ದೂರು ನೀಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಜರ್ಬಾದ್ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

7 ಮೌಲ್ಯದ ಆಭರಣವನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.

ಈ ಪತ್ತೆ ಕಾರ್ಯದಲ್ಲಿ ಡಿಸಿಪಿ ಗೀತ ಎಂ.ಎಸ್ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಸಹಾಯಕ

ಪೊಲೀಸ್ ಆಯುಕ್ತ ಶಶಿಧರ್.ಎಂ.ಎನ್. ನೇತೃತ್ವದಲ್ಲಿ ನೈಜರ್ ಬಾದ್ ಪೊಲೀಸ್ ಇನ್ಸ್ ಪೆಕ್ಟರ್ ಜೀವನ್, ಸಬ್ ಇನ್ಸ್ ಪೆಕ್ಟರ್ ಗಳಾದ ಕುಮಾರಿ, ವೈಶಾಲಿ ಬಿರಾದರ್, ರಘು.ಕೆ, ಸಿಬ್ಬಂದಿಗಳಾದ ಸತೀಶ್ ಕುಮಾರ್.ಎಸ್, ಕಿರಣ್ ರಾಥೋಡ್, ಸಂತೋಷ್ ಕುಮಾರ್.ಬಿ.ಡಿ, ಮಲ್ಲಿಕಾರ್ಜುನ, ಸವಿತಾ ಮಾನಪ್ಪವರ್, ಮತ್ತು ಸಿ.ಡಿ.ಆರ್ ಘಟಕದ ಕುಮಾರ್.ಪಿ ಭಾಗವಹಿಸಿದ್ದರು.