ಮಧ್ಯರಾತ್ರಿ ದಾಳಿ ಮಾಡಿ ರೌಡಿ ಶೀಟರ್ ಗಳಿಗೆ ಚಳಿ ಬಿಡಿಸಿದ ಸಿಸಿಬಿ

ಬೆಂಗಳೂರು: ಮಧ್ಯರಾತ್ರಿಯಲ್ಲೇ ರೌಡಿಶೀಟರ್ ಗಳ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಚಳಿ ಬಿಡಿಸಿದ್ದಾರೆ.

ಬೆಂಗಳೂರಿನಲ್ಲಿ ತಡರಾತ್ರಿ 2 ಗಂಟೆ ವೇಳೆ ಸಿಸಿಬಿ ಪೊಲೀಸರು ನಿದ್ರೆಯಲ್ಲಿದ್ದ ಕುಖ್ಯಾತ ರೌಡಿಗಳಿಗೆ ಶಾಕ್ ಕೊಟ್ಟಿದ್ದಾರೆ.

86ಕ್ಕೂ ಹೆಚ್ಚು ರೌಡಿ ಶೀಟರ್ ಗಳ ಮನೆಗಳಲ್ಲಿ CCB ಪೊಲೀಸರು ಪರಿಶೀಲನೆ ನಡೆಸಿದರು.

ಒಟ್ಟು 30 ರೌಡಿ ಶೀಟರ್ ಗಳನ್ನು CCB ಕಚೇರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.

ರೌಡಿಗಳಾದ ಸೈಕಲ್ ರವಿ, ಕೋತಿ ರಾಮ, ವಿಲ್ಸನ್ ಗಾರ್ಡನ್ ನಾಗ, ಆರ್.ಟಿ.ನಗರದ ವೆಂಕಟೇಶ, ಪಾರ್ಥಿಬನ್ ಸೇರಿ ಹಲವರ ಮನೆಯಲ್ಲಿ ಪೊಲೀಸರು ಶೋಧ ಮಾಡಿದರು.

ದಾಳಿ ವೇಳೆ ಕೆಲ ರೌಡಿಗಳು ಮನೆಯಲ್ಲಿ ಇರಲಿಲ್ಲ.

ಸಿಸಿಬಿ DCP ಯತೀಶ್ ಚಂದ್ರ ನೇತೃತ್ವದಲ್ಲಿ ಧರ್ಮೇಂದ್ರ, ರೀನಾ ಸುವರ್ಣ ಸೇರಿ ಐದು ಮಂದಿ ಎಸಿಪಿಗಳು, 20 ಇನ್ಸ್ ಪೆಕ್ಟರ್ ಗಳು ದಾಳಿಯಲ್ಲಿ ಭಾಗವಹಿಸಿ ರೌಡಿ ಚಟುವಟಿಕೆ ಮುಂದುವರೆಸದಂತೆ ರೌಡಿ ಶೀಟರ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ.