ಮೈಸೂರು: ಬಾಲಕಿ ಮೇಲೆ ಅತ್ಯಾಚಾರ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 43 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಮೈಸೂರು ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಧೀಶೆ ಶೈಮಾ ಕಮರೋಜ್ ಈ ಆದೇಶ ಮಾಡಿದ್ದಾರೆ.
ಬಿಹಾರ ಮೂಲದ ನಾಜೀಮ್ ಶಿಕ್ಷೆಗೊಳಗಾದ ಅಪರಾಧಿ.
ಬಾಲಕಿ ಪರ ವಿಶೇಷ ಸರ್ಕಾರಿ ಅಭಿಯೋಜಕಿ ಕೆ. ಬಿ. ಜಯಂತಿ ವಾದ ಮಂಡಿಸಿದ್ದರು.
2021ರಲ್ಲಿ 10 ವರ್ಷದ ಬಾಲಕಿ ಮೇಲೆ ನಾಜೀಮ್ ನಿರಂತರ ಅತ್ಯಾಚಾರ ಮಾಡಿದ ಆರೋಪವಿತ್ತು.
ಮೈಸೂರು-ಟಿ.ನರಸೀಪುರ ರಸ್ತೆಯ ತೋಟವೊಂದರಲ್ಲಿ ಈ ಹೇಯ ಘಟನೆ ನಡೆದಿತ್ತು.
ಮಹಿಳಾ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ ಸ್ಪೆಕ್ಟರ್ ಜೀವನ್.ಕೆ ತನಿಖೆ ನಡೆಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 43 ವರ್ಷ ಕಠಿಣ ಶಿಕ್ಷೆ ವಿಧಿಸಿ
ಬಾಲಕಿಗೆ 7 ಲಕ್ಷ ಪರಿಹಾರ ನೀಡುವಂತೆ ಮೈಸೂರು ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.