ಡಬಲ್ ಇಂಜಿನ್ ಸರ್ಕಾರದಿಂದ ಪ್ರಯೋಜನ ಇಲ್ಲ; ಎಚ್ ಡಿ ಕೆ ವಾಗ್ದಾಳಿ

ಶಿಡ್ಲಘಟ್ಟ: ಡಬಲ್ ಇಂಜಿನ್ ಸರ್ಕಾರ ಕರ್ನಾಟಕಕ್ಕೆ ಆಘಾತ ತರುವ ರೀತಿ ನಡೆದುಕೊಳ್ಳುತ್ತಿವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಶಿಡ್ಲಘಟ್ಟ ತಾಲೂಕಿನ ಸಾದಲಿಯಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.

ನಾಡಿನ ಸಮಸ್ಯೆಗೆ ಪರಿಹಾರ ಕೊಡುವ ಯಾವುದೇ ನಿರ್ಧಾರ ಮಾಡಿಲ್ಲ ಹಾಗಾಗು ಡಬಲ್ ಇಂಜಿನ್ ಸರ್ಕಾರದಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಕೇವಲ ಹತ್ತು ದಿನ ಅಧಿವೇಶ ನಡೆಸಲು ಮಾತ್ರ ಬೆಳಗಾವಿಯ ಸುವರ್ಣ ವಿಧಾನಸೌಧ  ಇಟ್ಟುಕೊಂಡಿದ್ದಾರೆ. ಉಳಿದ ದಿನಗಳಲ್ಲಿ ಇಲಿ, ಹೆಗ್ಗಣ ಓಡಾಡಿಕೊಂಡಿವೆ ಎಂದು ಎಚ್ ಡಿ ಕೆ ಗೇಲಿ ಮಾಡಿದರು.

ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಶಾಲೆ ತೆರೆಯಲು ಎಷ್ಟು ಮಹತ್ವ ನಿಡಿದ್ದೀರಿ,ಇದರಲ್ಲೇ ನಿಮ್ಮ ವೈಪಲ್ಯ ಕಾಣುತ್ತಿದೆ ಎಂದು ಕಿಡಿಕಾರಿದರು.

ಪಕ್ಷಾಂತರ ಪರ್ವ ನಡೆಯುತ್ತಿದೆ, ಚುನಾವಣೆ ಸಮಯದಲ್ಲಿ ಜೆಡಿಎಸ್ ಗೆ ಯಾರು ಬರುತ್ತಾರೆ ಯಾರು ಹೋಗುತ್ತಾರೆ ಗೊತ್ತಿಲ್ಲ. ಆದರೆ, ನಮಗೆ ನಮ್ಮ ಯೋಜನೆ ಅನುಷ್ಠಾನ ಮುಖ್ಯ ಎಂದು ಹೇಳಿದರು.

ನಮ್ಮ ಪಕ್ಷದಿಂದ ಹೊರಗೆ ಹೋಗಿರುವವರು ನಮಗೆ ಅವರ ಅವಶ್ಯಕತೆ ಇಲ್ಲ. ಹೋಗಿರೋರು ಯಾರೂ ಬರುವ ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರಿಸಿದರು.

ನಮ್ಮ ನಾಡಿನ ನೆಲ, ಜಲ ರಕ್ಷಣೆಗೆ ಬದ್ಧತೆ ಇರಬೇಕು. ಬೆಳಗಾವಿ ಹೈಸ್ಕೂಲ್ ನಲ್ಲಿ ಕನ್ನಡ ಶಾಲೆ ತೆರೆದಿಲ್ಲ. ಮರಾಠಿ ಶಾಲೆಗೆ ಹೋಗುವ ಪರಿಸ್ಥಿತಿ ಬಂದಿದೆ. ಇದಕ್ಕಾಗಿ ಪಂಚರತ್ನ ಯೋಜನೆ ಅಡಿ ಯಾವ ರೀತಿ ಸರ್ಕಾರಿ ಶಾಲೆ ತೆರಯಬೇಕು ಎಂಬ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಎಚ್ ಡಿ ಕೆ ತಿಳಿಸಿದರು.