ಸೀಮೆಸುಣ್ಣ ಮುರಿದ ವಿದ್ಯಾರ್ಥಿ ಅಂಗೈ ಗಾಯಗೊಳಿಸಿದ ಕ್ರೂರಿ ಶಿಕ್ಷಕ

ಎಚ್.ಡಿ.ಕೋಟೆ: ಸೀಮೆಸುಣ್ಣ ಮುರಿದುಹಾಕಿ ಆಟವಾಡುತ್ತಿದ್ದ ವಿಧ್ಯಾರ್ಥಿಗೆ ಶಿಕ್ಷಕರೊಬ್ಬರು ಸ್ಟೀಲ್ ಸ್ಕೇಲ್ ನಿಂದ ಹೊಡೆದು ಗಾಯಗೊಳಿಸಿರುವ ಘಟನೆ ಹೆಚ್.ಡಿ.ಕೋಟೆಯಲ್ಲಿ ನಡೆದಿದೆ.

ಶಿಕ್ಷಕನ ಕೃತ್ಯಕ್ಕೆ ಪೋಷಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದು ಶಿಕ್ಷಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸಧ್ಯ ವಿದ್ಯಾರ್ಥಿಯ ಬಲಭಾಗದ ಅಂಗೈ ಕತ್ತರಿಸಿ ಹೋಗಿದ್ದು ಗಾಯಕ್ಕೆ 6 ಸ್ಟಿಚ್ ಹಾಕಲಾಗಿದೆ.

ಎಚ್.ಡಿ.ಕೋಟೆ ಪಟ್ಟಣದ ಶಾಂತಿಪುರ ಸಮೀಪದ ಟ್ರೂಶಫರ್ಡ್ ಪಬ್ಲಿಕ್ ಶಾಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ.

8 ನೇ ತರಗತಿ ವಿಧ್ಯಾರ್ಥಿ ಅಮೃತ್ ಗಾಯಗೊಂಡಿದ್ದಾನೆ.

ಬಿಡುವಿನ ವೇಳೆಯಲ್ಲಿ ಅಮೃತ್  ಶಾಲಾ ಕೊಠಡಿಯಲ್ಲಿ ಸೀಮೆಸುಣ್ಣ ಮುರಿದು ಆಟವಾಡುತ್ತಿದ್ದ.

ಆದರೆ ಪುಟ್ಟ ಕಾರಣಕ್ಕೆ ಶಿಕ್ಷಕ ಸಿದ್ದರಾಜು ತೀವ್ರವಾಗಿ ಥಳಿಸಿದ್ದಾನೆ.ನಂತರ

ಪೋಷಕರಿಗೆ ಕರೆ ಮಾಡಿ ಅಮೃತ್ ಕಟ್ಟರ್ ನಿಂದ ಕೈ ಕಟ್ ಮಾಡಿಕೊಂಡಿದ್ದಾನೆಂದು ಸುಳ್ಳು ಮಾಹಿತಿ ನೀಡಿದ್ದಾನೆ.

ಸೌಜನ್ಯಕ್ಕೂ ಆಡಳಿತ ಮಂಡಳಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿ ಆರೋಗ್ಯ ವಿಚಾರಿಸಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಉದಯ್ ಕುಮಾರ್ ಮಾಹಿತಿ ಪಡೆದುಕೊಂಡು ಶಿಕ್ಷಕ ಸಿದ್ದರಾಜು ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.