ಪೊಲೀಸರಿಂದ ಪರಾರಿಯಾಗಲು ಯತ್ನ; ಸಾವಿನಲ್ಲಿ ಅಂತ್ಯ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಪೊಲೀಸರಿಂದ ಪರಾರಿಯಾಗಲು ಯತ್ನಿಸಿ ಯುವಕ, ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಯಳಂದೂರು  ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
ಯಳಂದೂರು ತಾಲೂಕಿನ ಕುಂತೂರುಮೋಳೆ ಗ್ರಾಮದ ಲಿಂಗರಾಜು ಮೃತ ದುರ್ದೈವಿ. 
ಅಪ್ರಾಪ್ತಗೆ ತಲೆಕೆಡಿಸಿ, ಆಕೆಯನ್ನು ಕರೆದೊಯ್ದ ಬಗ್ಗೆ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಕಳೆದ 23ರಂದು ಪ್ರಕರಣ ದಾಖಲಾಗಿತ್ತು. 
ತಾಲೂಕಿನ ಯರಿಯೂರು ಗ್ರಾಮದ ಸಮೀಪ ಮಂಗಳವಾರ ಆತನನ್ನು ಪೊಲೀಸರು ಠಾಣೆಗೆ ಕರೆದೊಯ್ಯುವಾಗ ಪರಾರಿಯಾಗಲು ಯತ್ನಿಸಿ ಜೀಪಿನಿಂದ  ಹಾರಿ ತೀವ್ರವಾಗಿ ಗಾಯಗೊಂಡಿದ್ದಾನೆ. 
ಬಳಿಕ, ಆತನನ್ನು ಆಸ್ಪತ್ರೆಗೆ ರವಾನಿಸಲಾಯಿತರಾದರೂ ಮೃತಪಟ್ಟಿದ್ದಾನೆ.
ಯಳಂದೂರು ಠಾಣೆ ಮುಂಭಾಗ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ಕುಟುಂಬಸ್ಥರು ಪ್ರತಿಭಟಿಸಿದ್ದಾರೆ.