ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ಪೊಲೀಸರಿಂದ ಪರಾರಿಯಾಗಲು ಯತ್ನಿಸಿ ಯುವಕ ಪ್ರಾಣವನ್ನೇ ಕಳೆದುಕೊಂಡ ಪ್ರಕರಣಕ್ಕೆ ಸಂಬಂದಿಸಿದಂತೆ ಇಲಾಖಾ ಐವರು ಸಿಬ್ಬಂದಿಗಳನ್ನ ಅಮಾನತು ಮಾಡಿದ್ದಾರೆ.
ಯಳಂದೂರು ಠಾಣೆಯ ವೃತ್ತ ಆರಕ್ಷಕ ಶಿವಮಾದಯ್ಯ, ಮಾಂಬಳ್ಳಿ ಸಬ್ ಇನ್ಸ್ ಪೆಕ್ಟರ್ ಮಾದೇಗೌಡ, ಎಎಸ್ಐ ಚಲುವರಾಜು ಮಹಿಳಾ ಮುಖ್ಯ ಪೇದೆ ಭದ್ರಮ್ಮ, ಪೇದೆ ಸೋಮಣ್ಣ ಅಮಾನತ್ತಾದ ಸಿಬ್ಬಂದಿಗಳಾಗಿದ್ದಾರೆ.
ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಕಳೆದ 23 ರಂದು ಪ್ರಕರಣ ದಾಖಲಾಗಿತ್ತು.
೨೯ರಂದು ಯಳಂದೂರು ತಾಲೂಕಿನ ಕುಂತೂರುಮೋಳೆ ಗ್ರಾಮದ ಲಿಂಗರಾಜು ಎಂಬಾತ ಕರೆತರುವಾಗ ಯರಿಯೂರು ಸಮೀಪ ಜೀಪಿನಿಂದ ಹಾರಲು ಯತ್ನಿಸಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಎನ್ನಲಾಗಿದೆ.ಈ ಸಂಬಂದ ಯಳಂದೂರು ಠಾಣೆ ಮುಂಭಾಗ ಮೃತರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಮೃತನ ಕಡೆಯವರು ನೀಡಿದ ದೂರಿನ ಮೇರೆಗೆ ಹಿರಿಯ ಅದಿಕಾರಿಗಳ ಸೂಚನೆ ಮೇರೆಗೆ ಯಳಂದೂರು ಠಾಣೆಯ ವೃತ್ತ ಆಕರ್ಷಕ ಶಿವಮಾದಯ್ಯ ,ಮಾಂಬಳ್ಳಿ ಸಬ್ ಇನ್ಸ್ ಪೆಕ್ಟರ್, ಸೋಮಣ್ಣ ಎಂಬುವವರ ಮೇಲೆ ಎಪ್ ಐ ಆರ್ ದಾಖಲಿಸಲಾಗಿದೆ. ಈಗಾಗಲೇ ಪೊಲೀಸ್ ವಶದಲ್ಲಿದ್ದ ಆರೋಪಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ಐವರು ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೆಶಕ ಮಧುಕರ್ ಪವಾರ್ ತಿಳಿಸಿದ್ದಾರೆ.