ಹುಬ್ಬಳ್ಳಿಯಲ್ಲಿ ಡಬಲ್ ಮರ್ಡರ್: ಮೂವರು ವಶಕ್ಕೆ

ಹುಬ್ಬಳ್ಳಿ: ಇಬ್ಬರು ಸ್ನೇಹಿತರು ಪರಸ್ಪರ ಬಡಿದಾಡಿಕೊಂಡು ಕೊಲೆಯಾಗಿರುವ ಘಟನೆ ನಡೆದಿದೆ.
ನಗರದ ಗೋಪನಕೊಪ್ಪದ ಬಳಿ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ.
ವಡ್ಡರ ಓಣಿಯ ಮಂಜುನಾಥ ಕಬ್ಬಿನ ಹಾಗೂ ನಿಯಾಜ್ ಜೋರಮ್ಮನವರ ಕೊಲೆಯಾದ ಯುವಕರು.
ಇಬ್ಬರಿಗೂ ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಮತ್ತು ಪ್ರೆಸ್ ಎಂದು ವಾಹನ ಬರೆದ ಟಾಕ್ಸಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ವಿವರ: ಮಂಜುನಾಥ ಕಬ್ಬಿನ ಜೊತೆ ಆಗಾಗ ನಿಯಾಜ್ ಜೋರಮ್ಮನವರ ಜಗಳವಾಡುತ್ತಿದ್ದ ಎನ್ನಲಾಗಿದೆ.
ಹಾಗಾಗಿ ಕಳೆದ ಹಲವು ದಿನಗಳಿಂದ ಎರಡು ಗುಂಪಿನ ನಡುವೆ ದ್ವೇಷ ಇತ್ತು ಎನ್ನಲಾಗಿದೆ.
ನಿಯಾಜ ಮತ್ತು ಮಂಜುನಾಥನ ಬುಧವಾರ ಮುಖಾಮುಖಿ ಆದಾಗ ಮಂಜುನಾಥನ ಜೊತೆಗೆ ಬಂದವರು ರಾಡ್ ನಿಂದ ಹೊಡೆದಿದ್ದಾರೆ.
ನಿಯಾಜ್ ಕೂಡಾ ಹೊಡೆದಿದ್ದಾನೆ. ಇದರಿಂದ ತೀವ್ರ ಗಾಯಗೊಂಡಿದ್ದ ಇಬ್ಬರನ್ನೂ ಕಿಮ್ಸ್ ಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಸಾವಿಗೀಡಾಗಿದ್ದಾರೆ.
ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.