ಬೆಂಗಳೂರು: ಬೃಹತ್ ಡ್ರಗ್ಸ್ ಜಾಲ ಬೆಂಗಳೂರಿನಲ್ಲಿ ಪತ್ತೆ ಆಗಿದೆ.
ಒಬ್ಬ ಮಹಿಳೆ ಸೇರಿ ಮೂರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಅನಿಕಾ, ಅನೂಪ್ ಮತ್ತು ರಾಜೇಶ್ ಬಂಧಿತರು.
ಬಂಧಿತರಿಂದ 2 ಕೋಟಿ ರೂಗೂ ಹೆಚ್ಚು ಮೌಲ್ಯ 511 ಎಂಡಿಎಂಎ ಮತ್ತು 180 ಎಲ್‍ಎಸ್‍ಡಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಟ ನಟಿಯರು, ಸಂಗೀತ ನಿರ್ದೇಶಕರು ಡ್ರಗ್ಸ್ ಖರೀದಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ನಗರದ ಕಲ್ಯಾಣನಗರದ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್ಮೆಂಟ್, ಥಣಿಸಂದ್ರದ ನಿಕೂ ಹೋಮ್ಸ್ ಮತ್ತು ದೊಡ್ಡಗುಬ್ಬಿಯ ಮನೆಯೊಂದರ ಮೇಲೆ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೇವನಹಳ್ಳಿಯಲ್ಲಿ ಡಗ್ಸ್ ಸರಬರಾಜು ಮಾಡಲು ಈ ಮೂವರ ಗ್ಯಾಂಗ್ ಮುಂದಾಗಿದ್ದಾಗ ಮಾಹಿತಿ ಪಡೆದ ಸಿಸಿಬಿ ಪೆÇಲೀಸರು ಕಾರ್ಯಾಚರಣೆ ನಡೆಸಿ ಇವರನ್ನ ಬಂದಿಸಿದ್ದಾರೆ.
ಈ ದಂಧೆಯ ಕಿಂಗ್ ಪಿನ್ ಕೈಸರ್ ಎಂಬಾತ. ಈತ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಶಾಂತಿನಗರ ವಾರ್ಡ್‍ನಿಂದ ಸ್ಪರ್ಧಿಸಿ ಸೋತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ಡ್ರಗ್ಸ್ ಜಾಲ ವಿಶಾಖಪಟ್ಟಣದಿಂದ ಮೈಸೂರಿನವರೆಗೆ ಚಾಚಿದೆ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಬಂಧಿತ ಅನಿಕಾಳ ಹೇಳಿಕೆ ಪ್ರಕಾರ ಸ್ಯಾಂಡಲ್ ವುಡ್ ನ ನಟ, ನಟಿಯರು, ಸಂಗೀತ ನಿರ್ದೇಶಕರು ಇವರ ಬಳಿ ಡ್ರಗ್ಸ್ ಖರೀದಿಸುತ್ತಿದ್ದರಂತೆ. ಯುವಕರು, ಯುವತಿಯರು, ಕಾಲೇಜು ವಿದ್ಯಾರ್ಥಿಗಳೂ ಕೂಡ ಇವರಿಗೆ ಗ್ರಾಹಕರೆಂಬು ಗೊತ್ತಾಗಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಬೆಂಗಳೂರಲ್ಲಿ ಡ್ರಗ್ಸ್ ಜಾಲವನ್ನು ಭೇದಿಸುವಲ್ಲಿ ಯಶಸ್ವಿ ಆಗಿದ್ದಾರೆ.