ಪಾರ್ಟ್ ಟೈಂ ಜಾಬ್ ನೀಡುವುದಾಗಿ ನಂಬಿಸಿ ಇಬ್ಬರಿಗೆ ವಂಚನೆ

ಮೈಸೂರು: ಪಾರ್ಟ್ ಟೈಂ ಜಾಬ್ ನೀಡುವುದಾಗಿ ನಂಬಿಸಿ ಒಂದಿಬ್ಬರು ವ್ಯಕ್ತಿಗಳನ್ನು ವಂಚಿಸಿರುವ ಪ್ರಕರಣ ನಗರದಲ್ಲಿ ನಡೆದಿದೆ.

ಮೈಸೂರಿನ ಶ್ರೀರಾಂಪುರ 2ನೇ ಹಂತದ ನಿವಾಸಿ ಕೆ.ಜಿ.ವಿಶ್ವನಾಥ್(42) ಹಾಗೂ ವಿಶ್ವೇಶ್ವರ ನಗರದ ಡಿ.ಎಸ್. ಮ್ಯಾಕ್ಸ್ ಅಪಾರ್ಟ್‌ ಮೆಂಟ್ ನಿವಾಸಿ ಎಂ.ಜಿ. ಮಂಜುನಾಥ್ (58) ವಂಚನೆಗೆ ಒಳಗಾಗಿದ್ದಾರೆ.

ಕೆ.ಜಿ.ವಿಶ್ವನಾಥ್ ಅವರಿಗೆ 3,30 ಲಕ್ಷ ರೂ. ವಂಚಿಸಲಾಗಿದೆ.

ಕೆ.ಜಿ.ವಿಶ್ವನಾಥ್  ಅವರ ಮೊಬೈಲ್‌ಗೆ ಪಾರ್ಟ್‌ ಟೈಂ ಜಾಬ್ ಬಗ್ಗೆ ಸಂದೇಶ ಬಂದಿದೆ.

ಅದನ್ನು ನಂಬಿದ ಅವರು, ಸಂದೇಶ ಬಂದಿದ್ದ ನಂಬರ್‌ಗೆ ವಾಪಸು ಕರೆ ಮಾಡಿದ್ದಾರೆ.

ಅಮೆಜಾನ್‌ ಶಾಪ್ ಜಾಬ್ ಡಾಟ್ ಕಾಂನಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿ ವಂಚಕರು 3,30,850 ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಎಂ.ಜಿ. ಮಂಜುನಾಥ್ ಎಂಬುವರಿಗೆ ಟೆಲಿಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಗಳು ಪಾರ್ಟ್ ಟೈಂ ಜಾಬ್ ಕೊಡಿಸುವುದಾಗಿ ನಂಬಿಸಿ 88,199 ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ.

ಈ ಎರಡೂ ಪ್ರಕರಣಗಳ ಬಗ್ಗೆ ಮೈಸೂರು ನಗರ ಸೆನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.