ಲೋಕಾಯುಕ್ತ ದಾಳಿ

ಚಾಮರಾಜನಗರ: ತಾಲ್ಲೋಕಿನ ಕೊಳ್ಳೇಗಾಲದಲ್ಲಿ ಎರಡು ಕಡೆ ಲೋಕಾಯುಕ್ತರು ಇಂದು ದಿಡೀರ್ ದಾಳಿ ನಡಸಿ ಪ್ರಮುಖ ಖಡತಗಳನ್ನ ವಶಪಡಿಸಿಕೊಂಡಿದ್ದಾರೆ‌.

ಸಾಮಾಜಿಕ ಕಾರ್ಯಕರ್ತ ಧಶರಥ್ ಹಾಗೂ ನಗರ ಸಭೆ ಸದಸ್ಯೆ ಜಯಮೇರಿ ನೀಡಿದ ದೂರಿನನ್ವಯ ದಾಳಿ ನಡೆಸಿದ್ದಾರೆ.

ಕೊಳ್ಳೆಗಾಲದ ನಗರಸಭೆ ಹಾಗೂ ಸರ್ಕಾರಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಚಾಮರಾಜನಗರ ಡಿವೈಸ್ಪಿ ದಾಳಿ ನಡೆಸಿ ಕಡತ ಪರಿಶೀಲನೆ ಮಾಡಿ ವಶಪಡಿಸಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್.ಪಿ.ಎಸ್.ಟಿ. ಒಡೆಯರ್ ನೇತೃತ್ವದಲ್ಲಿ ದಾಳಿ ನಡೆಸಿದರು. ಇನ್ಸ್ ಪೆಕ್ಟರ್ ಗಳಾದ ರವಿಕುಮಾರ್ ಶಶಿಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಲೋಕಾಯುಕ್ತರು ನಡೆಸಿದ ದಾಳಿಗೆ ಅದಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ.