ವಿಜೃಂಭಣೆಯಿಂದಜರುಗಿದಹನುಮ ಮೆರವಣಿಗೆ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರಹನುಮ ಜಯಂತಿ ಪ್ರಯುಕ್ತ  ಶ್ರಿ ಆಂಜನೇಯಸ್ವಾಮಿ ವಿಗ್ರಹದ ಬೃಹತ್ ಭವ್ಯ ಮೆರವಣಿಗೆ ನಡೆಯಿತು.

ಚಾಮರಾಜನಗರದ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಭಾನುವಾರ ಅಭಯ ಕಾರ್ಯಸಿದ್ದಿ  ಆಂಜನೇಯ ದೇವಸ್ಥಾನ (ಮಾರಿಗುಡಿ) ಮುಂಭಾಗದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ನಂದಿದ್ಬಜ, ನಗಾರಿ, ವೀರಭದ್ರ ಕುಣಿತ ಚಂಡೆ ಮದ್ದಳೆ, ಬ್ಯಾಂಡ್ , ಗಾರುಡಿಗ ಗೊಂಬೆ ಸೇರಿದಂತೆ ಇನ್ನಿತರ ಕಲಾತಂಡಗಳು ಭಾಗವಹಿಸಿದ್ದವು.

ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಯಾವುದೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ  ಬಂದೂಬಸ್ತ್ ನಿಯೋಜಿಸಲಾಗಿತ್ತು. ಎಎಸ್ಪಿ ಸುಂದರರಾಜು, ಡಿವೈಸ್ಪಿ ಗಳಾದ ಪ್ರಿಯದರ್ಶಿನಿ, ನಾಗರಾಜು ಸೇರಿದಂತೆ ಜಿಲ್ಲೆಯ ವಿವಿದ ಠಾಣಾ ಆರಕ್ಷರು ಭಾಗವಹಿಸಿದ್ದರು